×
Ad

ಬೆಳ್ತಂಗಡಿ ಕೇಂದ್ರ ಜುಮಾ ಮಸೀದಿ: ನೂತನ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಅಕ್ಬರ್ ಬೆಳ್ತಂಗಡಿ ಆಯ್ಕೆ

Update: 2025-07-25 20:56 IST

ಅಕ್ಬರ್ ಬೆಳ್ತಂಗಡಿ

ಬೆಳ್ತಂಗಡಿ: ಬೆಳ್ತಂಗಡಿ ಕೇಂದ್ರ ಖಿಲರ್ ಜುಮಾ ಮಸೀದಿ ಇದರ ವಾರ್ಷಿಕ ಮಹಾಸಭೆಯು ಶುಕ್ರವಾರ ಜುಮಾ ನಮಾಝಿನ ಬಳಿಕ ಖಿಲರ್ ಜುಮಾ ಮಸೀದಿಯ ಮದರಸ ಹಾಲ್ ನಲ್ಲಿ ಜಮಾಅತ್ ಖತೀಬ್ ಹನೀಫ್ ಫೈಝಿಯವರು ದುವಾ ಮೂಲಕ ನಡೆಯಿತು.

ಪ್ರಧಾನ ಕಾರ್ಯದರ್ಶಿ ರಝಾಕ್ ಕೊಡಿಸಭೆ ಕಳೆದ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಅಧ್ಯಕ್ಷರಾದ ಬಿ ಎ ನಝೀರ್ ರವರು ಕಳೆದ ಸಾಲಿನ ಅವಧಿಯಲ್ಲಿ ನಡೆದ ಮಸೀದಿಯ ಅಭಿವೃದ್ಧಿ ಕಾರ್ಯವನ್ನು ವಿವರಿಸಿದರು. ಮಹಮ್ಮದ್ ಬಿ ಎಚ್ ಗೌರವ ಅಧ್ಯಕ್ಷತೆಯಲ್ಲಿ ಹಳೆಯ ಸಮಿತಿಯನ್ನು ಬರ್ಕಾಸುಗೊಳಿಸಿ ನೂತನ ಸಮಿತಿಯನ್ನು ರಚಿಸಲಾಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ಅಕ್ಬರ್ ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ರಝಾಕ್ ಕೊಡಿಸಭೆ, ಉಪಾಧ್ಯಕ್ಷರಾಗಿ ಬಿ.ಶೇಕುಂಞ, ಬದ್ರುದ್ದಿನ್ ಮಟ್ಲ, ಜೊತೆ ಕಾರ್ಯದರ್ಶಿಗಳಾಗಿ ಹನೀಫ್ ವರ್ಷಾ, ಮಹಮ್ಮದ್ ಕುದ್ರಡ್ಕ, ಕೋಶಾಧಿಕಾರಿಯಾಗಿ ಫೈಝಲ್ ಐ.ಜೆ ಆಯ್ಕೆಯಾದರು.

ಸಮಿತಿಯ ಗೌರವ ಅಧ್ಯಕ್ಷರಾಗಿ ಬಿ ಎಚ್ ಮಹಮ್ಮದ್, ಗೌರವ ಸಲಹೆಗಾರರಾಗಿ ನಝೀರ್ ಬಿ. ಎ ರವರು ಆಯ್ಕೆಯಾದರು . ಈ ಸಂದರ್ಭದಲ್ಲಿ ಜಮಾತ್ ಬಾಂಧವರು ಉಪಸ್ಥಿತರಿದ್ದರು.

ಸಭೆಯನ್ನು ಕಾರ್ಯದರ್ಶಿ ರಝಾಕ್ ಕೊಡಿಸಭೆ ಸ್ವಾಗತಿಸಿ, ಯಾಕೂಬ್ ಮಾಸ್ಟರ್ ನಿರೂಪಿಸಿದರು.





 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News