×
Ad

ಬೆಳ್ತಂಗಡಿ: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Update: 2025-07-17 14:32 IST

ಬೆಳ್ತಂಗಡಿ: ಕೊಕ್ಕೆ ಸಮೀಪ ಸೌತಡ್ಕ ಗುಂಡಿ ಎಂಬಲ್ಲಿ ಗೇರು ಪ್ಲಾಂಟೇಶನ್ ನಲ್ಲಿ ಬೆಳ್ಳಂಬೆಳ್ಳಗೆ ಎರಡು ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಅದನ್ನು ಓಡಿಸುವ ಸಂದರ್ಭದಲ್ಲಿ ಓರ್ವ ವ್ಯಕ್ತಿ ಆನೆ ದಾಳಿಗೆ ಬಲಿಯಾದ ಘಟನೆ ಜು. 17 ಗುರುವಾರ ದಂದು ನಡೆದಿದೆ.

ಮೃತ ವ್ಯಕ್ತಿ ಸೌತಡ್ಕದ ನಿವಾಸಿ ಬಾಲಕೃಷ್ಣ ಶೆಟ್ಟಿ ಎಂದು ತಿಳಿದುಬಂದಿದೆ.

ಕಾಡಾನೆಯ ಹಿಂಡು ಈ ಪ್ರದೇಶದಲ್ಲಿ ಓಡಾಟ ನಡೆಸಿದ್ದು ಇದನ್ನು ಗಮನಿಸಿದ ಸ್ಥಳೀಯರು ಆನೆಯನ್ನು ಓಡಿಸುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಹೆಚ್ವಿನ ಮಾಹಿತಿಗಳು ಇನ್ನಷ್ಟೆ ತಿಳಿದು ಬರಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News