×
Ad

ಬೆಳ್ತಂಗಡಿ: ಅಂಕಾಜೆ ಸಮೀಪ ಭಾರೀ ಪ್ರಮಾಣದಲ್ಲಿ ಭೂ ಕುಸಿತ; ಸಂಚಾರ ಸ್ಥಗಿತ

Update: 2025-05-31 09:15 IST

ಬೆಳ್ತಂಗಡಿ: ತಾಲೂಕಿನಲ್ಲಿ ರಾತ್ರಿಯಿಡೀ ಭಾರೀ ಮಳೆ ಸುರಿದಿದ್ದು ಲಾಯಿಲ ಗ್ರಾಮದ ಅಂಕಾಜೆ ಸಮೀಪ ಭಾರೀ ಪ್ರಮಾಣದಲ್ಲಿ ಭೂ ಕುಸಿತವಾಗಿ ರಸ್ತೆಗೆ ಮಣ್ಣು, ಕಲ್ಲುಗಳು ಬಿದ್ದಿದ್ದು , ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಲಾಯಿಲ ಗ್ರಾಮದ ಅಂಕಾಜೆ ಸಮೀಪ ಲಾಯಿಲ-ನಿನ್ನಿಕಲ್ಲು ಚಂದ್ಕೂರು ರಸ್ತೆಯಲ್ಲಿ ಬಂಡೆಕಲ್ಲು ಸಮೇತ ಗುಡ್ಡ ಕುಸಿದು ರಸ್ತೆಗೆ ಬಿದ್ದಿದ್ದು ಸಂಪರ್ಕ ಕಡಿತಗೊಂಡಿದೆ.

ಈ ಬಗ್ಗೆ ಸ್ಥಳೀಯ ಗ್ರಾಮಪಂಚಾಯತಿಗೆ ಮಾಹಿತಿ ನೀಡಲಾಗಿದ್ದು ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ರಾತ್ರಿಯಿಡೀ ಸುರಿದಿದ್ದ ಮಳೆ ಬೆಳಗ್ಗಿನ ಜಾವ ಒಂದಿಷ್ಟು ಬಿಡುವು ನೀಡಿದ್ದು ಜನರು ನಿಟ್ಟುಸಿರು ಬಿಡುವಂತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News