×
Ad

ಬೆಳ್ತಂಗಡಿ | ಕುವೆಟ್ಟು ಗ್ರಾಪಂ ಅಧ್ಯಕ್ಷೆ ಭಾರತಿ ಶೆಟ್ಟಿಯ ವಿವಾದಿತ ಭಾಷಣದ ವಿರುದ್ಧ ಎಸ್‌ಡಿಟಿಯು ವತಿಯಿಂದ ದೂರು ದಾಖಲು

Update: 2025-05-13 14:07 IST

ಬೆಳ್ತಂಗಡಿ : ಗುರುವಾಯನಕೆರೆಯ ಬಂಟರ ಭವನದಲ್ಲಿ ನಡೆದ ʼಸುಹಾಸ್ ಶೆಟ್ಟಿ ನುಡಿ ನಮನʼ ಕಾರ್ಯಕ್ರಮದಲ್ಲಿ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ ಅವರು ಮುಸ್ಲಿಂ ಆಟೋ ಚಾಲಕರ ಬಗ್ಗೆ ಹಿಂದೂ-ಮುಸ್ಲಿಂ ಎಂದು ವಿಭಜಿಸಿ ಕೋಮು ಭಾವನೆಯನ್ನು ಕೆರಳಿಸಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕಾಗಿ ಸೋಶಿಯಲ್ ಟ್ರೇಡ್ ಯೂನಿಯನ್ ಗುರುವಾಯನಕೆರೆ ಇದರ ಅಧ್ಯಕ್ಷರಾದ ಅಬ್ದುಲ್ ರಹಮಾನ್ ರವರು ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮುಸ್ಲಿಂ ಆಟೋ ರಿಕ್ಷಾ ಚಾಲಕರ ಬಗ್ಗೆ ಹಾಗೂ ಮುಸ್ಲಿಂ ಅಂಗಡಿಗಳಲ್ಲಿ ವ್ಯಾಪಾರ-ವ್ಯವಹಾರ ಬಹಿಷ್ಕರಿಸುವಂತೆ, ಒಂದು ಸಮುದಾಯವನ್ನು ಇನ್ನೊಂದು ಸಮುದಾಯದ ವಿರುದ್ಧ ಎತ್ತಿ ಕಟ್ಟಿ ಸಮಾಜವನ್ನು ಹಿಂದು-ಮುಸ್ಲಿಂ ಎಂದು ವಿಭಜಿಸಿ ಕೋಮು ಭಾವನೆಯನ್ನು ಕೆರಳಿಸಿ, ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆಗೆ ದಕ್ಕೆ ತರುವಂತಹ ಭಾಷಣವನ್ನು ಮಾಡಿದ್ದು, ಇವರ ವಿರುದ್ದ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮೇ 11ರಂದು ಗುರುವಾಯನಕೆರೆ ಬಂಟರ ಭವನದಲ್ಲಿ "ಸುಹಾಸ್ ಶೆಟ್ಟಿಗೆ ನುಡಿನಮನ" ಎಂಬ ಕಾರ್ಯಕ್ರಮದಲ್ಲಿ ಕುವೆಟ್ಟು ಗ್ರಾಮ ಪಂಚಾಯತ್ ಇದರ ಅಧ್ಯಕ್ಷರಾದ ಭಾರತಿ ಶೆಟ್ಟಿ ಎಂಬವರು ಭಾಷಣ ಮಾಡುತ್ತಾ “ಗುರುವಾಯನಕೆರೆಯಲ್ಲಿ ಮುಸ್ಲಿಮರ ಸಂಖ್ಯೆ ಜಾಸ್ತಿ, ಮುಸ್ಲಿಮರಲ್ಲಿ ವ್ಯಾಪಾರ ಮಾಡಬಾರದು, ಮುಸ್ಲಿಂ ವ್ಯಕ್ತಿಗಳ ಆಟೋ ರಿಕ್ಷಾವನ್ನು ಉಪಯೋಗಿಸಬಾರದು. ಮುಸ್ಲಿಮರ ಜೊತೆಗಿನ ವ್ಯಾಪಾರ-ವ್ಯವಹಾರವನ್ನು ಬಹಿಷ್ಕರಿಸುವಂತೆ ಬಹಿರಂಗವಾಗಿ ಕರೆಯನ್ನು ನೀಡುತ್ತಾ, ಕೋಮು-ಸೌರ್ಹಾಧವನ್ನು ಕೆಡಿಸುವಂತಹ ಭಾಷಣವನ್ನು ಮಾಡಿದ್ಧಾರೆ. ಅದೂ ಅಲ್ಲದೇ ಗುರುವಾಯನಕೆರೆ ವ್ಯಾಪ್ತಿಯ ಆಟೋ ರಿಕ್ಷಾದಲ್ಲಿ ಕಷ್ಟಪಟ್ಟು ದುಡಿಯುವಂತಹ ಮುಸ್ಲಿಂ ಆಟೋ ಚಾಲಕರ ಬಗ್ಗೆ ಇಲ್ಲ-ಸಲ್ಲದ ಆರೋಪಗಳನ್ನು ಮಾಡಿ, ಹಿಂದುಗಳು ಮುಸ್ಲಿಮರ ಆಟೋಗಳನ್ನು ಉಪಯೋಗಿಸದಂತೆ ಕರೆ ನೀಡಿದ್ದಾರೆ. ಇವರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಜರಗಿಸಬೇಕೆಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಎಸ್‌ಡಿಟಿಯು ಘಟಕದ ಪದಾಧಿಕಾರಿಗಳು ಹಾಗೂ ಹಿರಿಯ ಆಟೋ ಚಾಲಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News