×
Ad

ಬೆಳ್ತಂಗಡಿ | ಶಿಕ್ಷಕಿಯೊರ್ವರ ಮೃತದೇಹ ಬಾವಿಯಲ್ಲಿ ಪತ್ತೆ

Update: 2025-10-23 15:08 IST

ಬೆಳ್ತಂಗಡಿ : ಅರಸಿನಮಕ್ಕಿಯ ಬೂಡುಮುಗೇರು ನಿವಾಸಿ, ಅರಸಿನಮಕ್ಕಿ ಗೋಪಾಲಕೃಷ್ಣ ಅನುದಾನಿತ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ತೇಜಸ್ವಿನಿ (23) ಅವರ ಮೃತದೇಹ ಅ. 23 ಗುರುವಾರದಂದು ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ.

ಇವರು ಕಳೆದ ಎರಡು ವರ್ಷಗಳಿಂದ ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.

ಇವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರೆನ್ನಲಾಗಿದ್ದು, ಕಾಲು ಜಾರಿ ಬಾವಿಗೆ ಬಿದ್ದರೇ, ಅಥವಾ ಆತ್ಮಹತ್ಯೆ ಮಾಡಿಕೊಂಡರೇ ಎಂಬುದು ಇನ್ನು ಖಚಿತವಾಗಿಲ್ಲ.

ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತರು ತಂದೆ, ತಾಯಿ, ಸಹೋದರಿಯರು, ಬಂಧು ಬಳಗವನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News