ಬೆಳ್ತಂಗಡಿ: ಚಲಿಸುತ್ತಿದ್ದ ಸ್ಕೂಟರ್ ಮೇಲೆ ಬಿದ್ದ ಮರ; ಅಪಾಯದಿಂದ ಪಾರಾದ ದಂಪತಿ
Update: 2025-06-15 14:32 IST
ಬೆಳ್ತಂಗಡಿ: ತಾಲೂಕಿನಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು ಕುಕ್ಕಾವು ಕೊಪ್ಪದ ಗಂಡಿ ಸಮೀಪ ಚಲಿಸುತ್ತಿದ್ದ ಸ್ಕೂಟರ್ ಮೇಲೆ ಮರ ಬಿದ್ದು ದಂಪತಿ ಗಾಯಗೊಂಡ ಘಟನೆ ಸಂಭವಿಸಿದೆ.
ಕಡಿರುದ್ಯವಾರ ಗ್ರಾಮದ ಎರ್ಮಾಲ ಪಲ್ಕೆ ನಿವಾಸಿಗಳಾದ ಗುಮ್ಮಣ್ಣ ಮತ್ತು ವಿಮಲಾ ಗಾಯಗೊಂಡ ವರು.
ಸ್ಥಳೀಯರ ಸಹಕಾರದಿಂದ ಕೂಡಲೇ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೊಡ್ಡ ಮರವೇ ಸ್ಕೂಟರ್ ಮೇಲೆ ಬಿದ್ದಿದ್ದು ಅದೃಷ್ಟವಶಾತ್ ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ