ಪಚ್ಚನಾಡಿ ಬಳಿ ಬೈಕ್ ಅಪಘಾತ: ಸಹಸವಾರ ಮೃತ್ಯು
Update: 2026-01-21 21:17 IST
ಮಂಗಳೂರು, ಜ.21: ನಗರದ ಹೊರವಲಯದ ಮೂಡುಶೆಡ್ಡೆ ಸಮೀಪದ ಪಚ್ಚನಾಡಿಯಲ್ಲಿ ಮಂಗಳವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸಹಸವಾರ ಮಾವ ಮೃತಪಟ್ಟಿದ್ದು, ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೂಡುಶೆಡ್ಡೆ ನಿವಾಸಿ ತುಕಾರಾಮ (60) ಮೃತಪಟ್ಟವರು. ಕಾರ್ಯಕ್ರಮವೊಂದಕ್ಕೆ ಬೈಕ್‌ನಲ್ಲಿ ಹೊರಟಿದ್ದರು. ಅವರ ಅಳಿಯ ಪ್ರವೀಣ್ ಬೈಕ್ ಚಲಾಯಿಸುತ್ತಿದ್ದರು. ಪಚ್ಚನಾಡಿ ಬಳಿ ಬೈಕ್ ನಿಯಂತ್ರಣ ತಪ್ಪಿ ಇಬ್ಬರೂ ಹೊಂಡಕ್ಕೆ ಬಿದ್ದಿ ದ್ದಾರೆ. ಇದರಿಂದ ತುಕಾರಾಮ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಸವಾರ ಪ್ರವೀಣ್‌ರಿಗೆ ಗಾಯವಾಗಿದೆ.
ಈ ಬಗ್ಗೆ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.