×
Ad

ರಾಜಕೀಯ ಅಧಿಕಾರ ಪಡೆದಾಗ ದೌರ್ಜನ್ಯ ತಡೆಗಟ್ಟಲು ಸಾಧ್ಯ: ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್

Update: 2026-01-21 22:29 IST

ಮಂಗಳೂರು: ರಾಜಕೀಯ ಅಧಿಕಾರ ಪಡೆದಾಗ ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ಪಾರಾಗಲು ಸಾಧ್ಯ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಅಭಿಪ್ರಾಯಪಟ್ಟರು.

ಎಸ್‌ಡಿಪಿಐಯ ಎನ್‌ಆರ್‌ಸಿಗೆ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ನಗರದ ಪುರಭವನದಲ್ಲಿ ಬುಧವಾರ ಆಯೋಜಿಸಲಾದ ಅಭಿನಂದನಾ ಸಭೆಯಲ್ಲಿ ಅವರು ಅಭಿನಂದನಾ ಭಾಷಣ ಮಾಡಿದರು.

ಅಧಿಕಾರ ಬಲಾಡ್ಯರ ಕೈಯಲ್ಲಿರುವುದರಿಂದ ಅಲ್ಪಸಂಖ್ಯಾತರು, ದಲಿತರು ಆದಿವಾಸಿಗಳು ಶೋಷಣೆಗೊಳಗಾಗುತ್ತಿ ದ್ದಾರೆ. ಕೈಯಲ್ಲಿ ಅಧಿಕಾರ ಇಲ್ಲದ ಕಾರಣ ಅವರ ಮೇಲೆ ನಿರಂತರ ದೌಜನ್ಯ ನಡೆಯುತ್ತಿದೆ ಎಂದರು.

ಇವತ್ತು ನಮ್ಮಲ್ಲಿ ಸಂವಿಧಾನದ ಪರ ಮತ್ತು ಸಂವಿಧಾನ ವಿರೋಧಿ ಎಂಬ ಎರಡು ಪಕ್ಷಗಳು ನಮಲ್ಲಿದೆ. ಈ ವರೆಗೆ ಆಡಳಿತ ನಡೆಸಿದ ಎಲ್ಲ ಪಕ್ಷಗಳು ಈಗ ಆಳುತ್ತಿರುವ ಪಕ್ಷ ಸಂವಿಧಾನ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಜಾತೀಯತೆ, ಸ್ವಜನಪಕ್ಷಪಾತ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು.

ಅಲ್ಪಸಂಖ್ಯಾತರು, ದಲಿತರ ಹಿತ ಕಾಯುವ ಪಕ್ಷ ಎಸ್‌ಡಿಪಿಐ ಆಗಿದೆ. ಪ್ರಜಾತಂತ್ರವನ್ನು ಗಟ್ಟಿಗೊಳಿಸುವ ಪಕ್ಷ ಮತ್ತು ಚಳವಳಿ ಇಂದು ಬೇಕಾಗಿದೆ. ಪ್ರಜಾಪ್ರಭುತ್ವ, ಸಂವಿಧಾನವನ್ನು ರಕ್ಷಿಸುವ ಏಕೈಕ ಪಕ್ಷ ಎಸ್‌ಡಿಪಿಐ. ಸಂವಿಧಾನ ಉಳಿದರೆ ಮಾತ್ರ ಎಲ್ಲರಿಗೂ ಸ್ವಾಭಿಮಾಬದ ಬದುಕು ಸಾಧ್ಯ ಎಂದರು.

ಮಾಜಿ ಸಂಸದ ಒಬೈದುಲ್ಲಾ ಖಾನ್ ಅಜ್ಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ರಾಜಕೀಯ ಎನ್ನುವುದು ಮಾನವ ಸೇವೆ ಆಗಿದೆ. ಆದರೆ ಅಧಿಕಾರ ಅನುಭವಿಸಲು ಇವರುವಂತದ್ದಲ್ಲ ಎಂದರು.

ಎಸ್‌ಡಿಪಿಐನ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳಿಗೆ ಅಭಿನಂದನಾ ಸಭೆಗೂ ಮುನ್ನ ನಗರದ ಜ್ಯೋತಿ ವೃತ್ತದಿಂದ ಪುರಭವನದ ತನಕ ಬೃಹತ್ ರ್ಯಾಲಿ ನಡೆಯಿತು.

ಎನ್‌ಆರ್‌ಸಿಗೆ ಆಯ್ಕೆಯಾಗಿರುವ ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಮುಹಮ್ಮದ್ ಶಫಿ, ಉಪಾಧ್ಯಕ್ಷ ಸೀತಾರಾಮ್ ಖಾಟಿಕ್, ಶೇಖ್ ಮುಹಮ್ಮದ್, ಪ್ರಧಾನ ಕಾರ್ಯದರ್ಶಿಗಳಾದ ಮುಹಮ್ಮದ್ ಅಶ್ರಫ್ ಅಂಕಜಾಲ್, ಮುಹಮ್ಮದ್ ರಿಯಾಝ್, ಅಬ್ದುಲ್ ಮಜೀದ್, ಮೆಹರ್ ಅಫ್ರೋಝ್ ಯಾಸ್ಮೀನ್, ಕಾರ್ಯದರ್ಶಿಗಳಾದ ಅಲ್ಫೋನ್ಸ್ ಫ್ರಾಂಕೊ ,ತೈದುಲ್ ಉಲ್ ಇಸ್ಲಾಂ, ಸಅದೀಯ ಸಯೀದಾ, ಡಿ.ಎಸ್.ಬಿಂದ್ರಾ, ಅತಿಕಾ ಸಾಜಿದ್ ಮತ್ತು ಯಾಮೊಯ್ದೀನ್ , ಖಜಾಂಚಿ ಜಿ. ಅಬ್ದುಲ್ ಸತ್ತಾರ್ ಅವರನ್ನು ಅಭಿನಂದಿಸಲಾಯಿತು.










 


 


 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News