×
Ad

ಸಿಎಸ್‌ಇಇಟಿ ಪರೀಕ್ಷೆ: ಆಳ್ವಾಸ್‌ನ ವಿದ್ಯಾರ್ಥಿಗಳು ಸಾಧನೆ

Update: 2026-01-21 19:53 IST

ಮೂಡುಬಿದಿರೆ : ದಿ ಇನ್‌ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರೀಸ್ ಆಫ್ ಇಂಡಿಯಾ ಜನವರಿ ಆವೃತ್ತಿಯಲ್ಲಿ ನಡೆದ ಕಂಪೆನಿ ಸೆಕ್ರಟರೀಸ್ ಎಕ್ಸಿಕ್ಯೂಟಿವ್ ಎಂಟ್ರೆನ್ಸ್ ಟೆಸ್ಟ್ (ಸಿಎಸ್‌ಇಇಟಿ) ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ 13 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಪ್ರೀತಂ ಬಸವರಾಜ್ ಪಟ್ಟಣಶೆಟ್ಟಿ (121), ದೀಕ್ಷಿತ್ ಕುಮಾರ್ (120), ಸುಜೀತ್ ರಾಘವೇಂದ್ರ ಎ (120), ಯಶವಂತ ರೆಡ್ಡಿ ಎಸ್ (111), ರುಜುಲಾ ಕೆ (110), ದಿಯಾ ಎಸ್ ಶೆಟ್ಟಿ (107), ನಂದನ್ ಗೌಡ ಆರ್ (100), ನಂದಿಕಾ ಶ್ರೀ ಡಿ. ವಿ (100), ಮನೀಶ್ ಗೌಡ ಆರ್ (100), ಶರಣ್ಯ ಯು ಶೆಟ್ಟಿ (100), ಬಸವಪ್ರಸಾದ್ ಎಸ್ ಮಳಗಲಿ (100), ಸುಪ್ರಿಯಾ ಎಂ (100), ಶ್ರೇಯಾ ದಿನೇಶ್ ಕಟಾರಿಯಾ (100) ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು.

ವಿದ್ಯಾರ್ಥಿಗಳ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News