ಸಿಟ್ ತನಿಖೆಯ ದಿಕ್ಕುತಪ್ಪಿಸಲು ಬಿಜೆಪಿ ಯತ್ನ: ಸಿಪಿಎಂ ಆರೋಪ
Update: 2025-08-09 00:32 IST
ಮುನೀರ್ ಕಾಟಿಪಳ್ಳ
ಮಂಗಳೂರು, ಆ.8: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳು ಮತ್ತು ಮೃತದೇಹ ಹೂತು ಹಾಕಿರುವ ಪ್ರಕರಣದಲ್ಲಿ ಎಸ್‌ಐಟಿ ಪ್ರಭಾವಗಳಿಗೆ ಮಣಿಯದೆ ತನಿಖೆ ನಡೆಸುತ್ತಿರುವುದು ಬಿಜೆಪಿಯನ್ನು ಹತಾಶೆಗೆ ತಳ್ಳಿದೆ. ಅದರ ಪರಿಣಾಮವಾಗಿ ಎಸ್‌ಐಟಿ ತನಿಖೆ ಹಾಗೂ ಜನಾಕ್ರೋಶದ ದಿಕ್ಕನ್ನು ತಪ್ಪಿಸಲು ಬಿಜೆಪಿ ಶಾಸಕರು, ನಾಯಕರು ಯತ್ನಿಸುತ್ತಿದ್ದಾರೆ ಎಂದು ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.