×
Ad

ದ.ಕ.ಜಿಲ್ಲೆಯ 200ಕ್ಕೂ ಅಧಿಕ ಫುಟ್ಬಾಲ್ ಆಟಗಾರರದಿಂದ ರಕ್ತದಾನ

Update: 2023-08-05 19:12 IST

ಮಂಗಳೂರು: ದ.ಕ.ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ವತಿಯಿಂದ 25ನೇ ವರ್ಷದ ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಪಂದ್ಯಾಟ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ನೆಹರೂ ಮೈದಾನದಲ್ಲಿ ಶನಿವಾರ ನಡೆದ ಶಿಬಿರದಲ್ಲಿ ಸುಮಾರು 200ಕ್ಕೂ ಅಧಿಕ ಕ್ರೀಡಾಪಟುಗಳು ರಕ್ತದಾನಗೈದರು.

ಮಾಜಿ ಶಾಸಕ ಜೆ.ಆರ್.ಲೋಬೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕ್ರೀಡಾ ಪೋಷಕ ಎಸ್‌ಎಂ ರಶೀದ್ ಹಾಜಿ, ಉದ್ಯಮಿ ಮನ್ಸೂರ್ ಅಹ್ಮದ್ ಆಝಾದ್, ಮೋಹನ್ ಬೆಂಗ್ರೆ, ಹುಸೈನ್ ಬೋಳಾರ್, ಹ್ಯೂಮನ್ ರೈಟ್ಸ್ ದ.ಕ.ಜಿಲ್ಲಾ ಉಸ್ತುವಾರಿ ಸುದೇಶ್ ಶೆಟ್ಟಿ, ಯೂನಿಯನ್ ಬ್ಯಾಂಕ್‌ನ ಡಿಜಿಯಂ ಮಹೇಶ್, ಡಿ.ಎಂ. ಅಸ್ಲಾಂ, ಫಿರೋಝ್ ಉಳ್ಳಾಲ್, ಮಂಗಳೂರು ಯುನೈಟೆಡ್‌ನ ಅಶ್ಫಾಕ್, ಸುಜಿತ್ ಕೆ.ವಿ, ಲತೀಫ್ ಕಸಬ, ಇಲ್ಯಾಸ್ ಫೆರ್ನಾಂಡಿಸ್, ಸಂಶುದ್ದಿನ್ ಬಂದರ್ ಉಪಸ್ಥಿತರಿದ್ದರು.

ಅಸೋಸಿಯೇಶನ್ ಅಧ್ಯಕ್ಷ ಡಿ.ಎಂ.ಅಸ್ಲಂ ಸ್ವಾಗತಿಸಿದರು. ಹುಸೈನ್ ಬೋಳಾರ್ ವಂದಿಸಿದರು. ಅಲಿಸ್ಟರ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News