×
Ad

ಯು.ಟಿ. ಎಂ ಟ್ರಸ್ಟ್ ವತಿಯಿಂದ ಪುಸ್ತಕ ವಿತರಣೆ

Update: 2025-06-04 14:35 IST

ಉಳ್ಳಾಲ: ಯು.ಟಿ.ಎಂ ಚಾರಿಟೇಬಲ್ ಟ್ರಸ್ಟ್ ಉಳ್ಳಾಲ ಇದರ ವತಿಯಿಂದ ಯತೀಮ್,ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಪುಸ್ತಕ ವಿತರಣಾ ಸಮಾರಂಭ ಇತ್ತೀಚೆಗೆ ಉಳ್ಳಾಲದ ಟ್ರಸ್ಟ್ ನ ಕಛೇರಿಯಲ್ಲಿ ನಡೆಯಿತು. ಟ್ರಸ್ಟಿನ ಅಧ್ಯಕ್ಷ ಹಾಜಿ ಫಾರೂಕ್ ಅಬ್ಬಾಸ್ ಉಳ್ಳಾಲ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಸದಸ್ಯರಾದ ಅಬ್ದುಲ್ ಖಾದರ್ ಸಾದಾತ್ ಉಳ್ಳಾಲ ಉದ್ಘಾಟಿಸಿದರು. ಹಾಜಿ ಫಾರೂಕ್ ಅಬ್ಬಾಸ್ ಮಾತನಾಡಿ ಶುಭ ಹಾರೈಸಿದರು.

ಈ ಕಾರ್ಯಕ್ರಮ ದಲ್ಲಿ ಕೋಶಾಧಿಕಾರಿ ಬಶೀರ್ ಉಳ್ಳಾಲ, ಸದಸ್ಯರಾದ ಆರಿಫ್ ಡಿ.ಎಂ, ಉಪಸ್ಥಿತರಿದ್ದರು. ಕಾರ್ಯದರ್ಶಿ ಮೊಯ್ದಿನ್ ಹಾಜಿ ಮೊಂಟೆಪದವು ಸ್ವಾಗತಿಸಿದರು.ಶರೀಫ್ ಕೋಟಪುರ ವಂದಿಸಿದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News