ಏಸ್ ಫೌಂಡೇಶನ್ ಸಹಭಾಗಿತ್ವ; ಬ್ರಿಟ್ ಫೋರ್ಟ್ ಅಕಾಡೆಮಿಯ ಮಂಗಳೂರು ಶಾಖೆ ಪ್ರಾರಂಭ
ಮಂಗಳೂರು: ನಗರದ ಏಸ್ ಫೌಂಡೇಶನ್ ಸಂಸ್ಥೆಯ ಸಹಭಾಗಿತ್ವದೊಂದಿಗೆ ಖ್ಯಾತ ಇಂಗ್ಲಿಷ್ ಅಕಾಡೆಮಿ ʼಬ್ರಿಟ್ ಫೋರ್ಟ್ʼ ತನ್ನ 16ನೆ ಶಾಖೆಯನ್ನು ಮಂಗಳೂರು ನಗರದ ಕಂಕನಾಡಿ ಬೈಪಾಸ್ ರಸ್ತೆಯ ಕಂಕನಾಡಿ ಗೇಟ್ ಕಟ್ಟಡದಲ್ಲಿ ಬ್ರಿಟ್ ಫೋರ್ಟ್ ಸಂಸ್ಥೆಯ CEO ನೌಶಾದ್ ನೀಲ್ಸಿರಿಸ್ ಅವರು ಉದ್ಘಾಟಿಸಿದರು.
IELTS, PTE, OTE ಮುಂತಾದ ಇಂಗ್ಲಿಷ್ ಪರೀಕ್ಷೆಗೆ ತರಬೇತಿಯನ್ನು ನೀಡುವ ಈ ಸಂಸ್ಥೆಯು ಉನ್ನತ ಶಿಕ್ಷಣ ಪಡೆಯಲು ವಿದೇಶಗಳಿಗೆ ಹೋಗುವ (study abroad) ವಿದ್ಯಾರ್ಥಿಗಳಿಗೆ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಕೂಡ ಖ್ಯಾತಿಯನ್ನು ಹೊಂದಿದೆ ಎಂದು ಸಂಸ್ಥೆಯ CEO ನೌಶಾದ್ ನೀಲ್ಸಿರಿಸ್ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.
ಬ್ರಿಟ್ ಫೋರ್ಟ್ 25 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿದೆ ಎಂದು ತಿಳಿಸಿದರು.
ಯೆನೆಪೊಯ ಯುನಿವರ್ಸಿಟಿಯ ಇಂಜಿನಿಯರ್ ವಿಭಾಗದ ಡೀನ್ ಡಾ. ಅರ್ ಜಿ ಡಿಸೋಜಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಏಸ್ ಫೌಂಡೇಶನ್ ಈಗಾಗಲೇ ಏಸ್ ಐಎಎಸ್ ಅಕಾಡೆಮಿಯನ್ನು ಮಂಗಳೂರಿಗೆ ನೀಡಿದ್ದು ಇದೀಗ ಉತ್ತಮ ಇಂಗ್ಲಿಷ್ ಅಕಾಡೆಮಿಯನ್ನು ಹಾಗೂ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಬಯಸುವ ಇಲ್ಲಿನ ಯುವಜನತೆಗೆ ಹೊಸ ಸೌಲಭ್ಯವನ್ನು ಒದಗಿಸುವ ಸೇವೆಯನ್ನು ನೀಡುತ್ತಿರುವುದು ಸ್ಲಾಗಣೀಯವೆಂದು ತಿಳಿಸಿ ಶುಭಹಾರೈಸಿದರು.
ಜಮೀಯತುಲ್ ಫಲಾಹ್ ಮಂಗಳೂರು ನಗರ ಘಟಕ ಅಧ್ಯಕ್ಷ ಮೊಹಮ್ಮದ್ ಬಷೀರ್ ಹಾಗು 'ಹನ' ಬೆವೆರೆಜಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕ ಅನ್ವರ್ ಸಾದತ್ ಅವರು ಸಭೆಯಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದರು.
ಏಸ್ ಫೌಂಡೇಶನ್ ಅಧ್ಯಕ್ಷರಾದ ಅಬೂಬಕರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಏಸ್ ಐಎಎಸ್ ಅಕಾಡೆಮಿಯ ನಿರ್ದೇಶಕ ನಝೀರ್ ಅಹ್ಮದ್ ಅವರು ಸ್ವಾಗತಿಸಿದರು.
ಏಸ್ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಇಮಿಯಾಝ್ ಖತೀಬ್ ಅವರು ಧನ್ಯವಾದ ಅರ್ಪಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.