ಬಿ ಎಸ್ ಡಬ್ಲ್ಯೂ ಡಿ ಮಹಿಳೆಯರ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಸಮಾರೋಪ
ಬಂಟ್ವಾಳ : ಭಾರತ್ ಸೋಷಿಯಲ್ ಆಂಡ್ ವೆಲ್ಫೇರ್ ಟ್ರಸ್ಟ್, ಮಂಗಳೂರು ಹಾಗೂ ಬಾಳೆಪುಣಿ ಗ್ರಾಮ ಪಂಚಾಯತ್ ಇವರ ಸಂಯುಕ್ತ ಆಶ್ರಯದಲ್ಲಿ ಟ್ರಸ್ಟ್‌ನ ದಶಮಾನೋತ್ಸವದ ಪ್ರಯುಕ್ತ ಆಯೋಜಿಸಲಾದ ಮಹಿಳೆಯರ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮವು ಬಾಳೆಪುಣಿಯ ರಾಜೀವ್ ಗಾಂಧಿ ಸ್ಮಾರಕ ಸಭಾಂಗಣದಲ್ಲಿ ನಡೆಯಿತು.
ಭಾರತ್ ಸೋಷಿಯಲ್ ಆಂಡ್ ವೆಲ್ಫೇರ್ ಟ್ರಸ್ಟ್ ಮಂಗಳೂರು ಅಧ್ಯಕ್ಷ ಎನ್. ಅಮೀನ್ ಪಕ್ಕಲಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಅಧೀಕ್ಷಕ ಹರೀಶ್ ಕುಮಾರ್ ಕುತ್ತಡ್ಕ ಅವರು ಟ್ರಸ್ಟ್‌ನ ಹತ್ತನೇ ವರ್ಷದ ಲಘು ಸಂಚಿಕೆ ಬಿಡುಗಡೆಗೊಳಿಸಿದರು.
ಶಿಬಿರದಲ್ಲಿ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು . ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಬಾಳೆಪುಣಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ,. ಉಪಾಧ್ಯಕ್ಷ ಸಿಎಂ ಶರೀಫ್ ಪಟ್ಟೋರಿ ಶುಭ ಹಾರೈಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಸ್ವಚ್ಛತಾ ರಾಯಭಾರಿ ಶ್ರೀ ಶೀನ ಶೆಟ್ಟಿ ಅವರು, ಕೌಶಲ್ಯದ ಜೊತೆಗೆ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಕಾರ್ಯದರ್ಶಿ ಆಯಿಷಾ ಬಾನು ಬಿ.ಎ ಮಾತನಾಡಿದರು.
ಶಿಕ್ಷಕಿ ಶ್ರೀಮತಿ ಮಾಲಾಕ್ಷಿ ಸಮಾರೋಪ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಭಂಡಾರಿ, ಬಿಎಸ್ ಡಬ್ಲ್ಯೂ ಟಿ ಮಂಗಳೂರು ಉಪಾಧ್ಯಕ್ಷ ಅಬ್ದುಲ್ಲಾ ಹಾಗೂ ಸತ್ತಾರ್ ಕೈರಂಗಳ ಉಪಸ್ಥಿತರಿದ್ದರು.
ಅಶೀರುದ್ದೀನ್ ಸಾರ್ತಬೈಲ್ ಸ್ವಾಗತಿಸಿದರು.