ಜ.1: ಕೇರಳ ಯಾತ್ರೆಯ ಭಾಗವಾಗಿ ಎಸ್.ವೈ.ಎಸ್ ಐಕ್ಯದಾರ್ಢ್ಯ ಸಂಗಮ
ಮಂಗಳೂರು: "ಮನುಷ್ಯರೊಂದಿಗೆ" ಎಂಬ ಘೋಷವಾಕ್ಯದಲ್ಲಿ ಕೇರಳ ಮುಸ್ಲಿಂ ಜಮಾಅತ್ ವತಿಯಿಂದ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರ ನೇತೃತ್ವದಲ್ಲಿ ಜನವರಿ 1 ರಿಂದ 16 ತನಕ ಕಾಸರಗೋಡಿನಿಂದ ತಿರುವನಂತಪುರ ತನಕ ನಡೆಯುವ ಮೂರನೆಯ ಕೇರಳ ಯಾತ್ರೆಯ ಭಾಗವಾಗಿ ಜನವರಿ 1 ಗುರುವಾರ ಮಧ್ಯಾಹ್ನ 1:30 ಗಂಟೆಗೆ ಉಳ್ಳಾಲ ದರ್ಗಾ ಝಿಯಾರತ್ ನಡೆಯಲಿದೆ.
ನಂತರ ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲಾ ಸಮಿತಿಯಿಂದ ಉಳ್ಳಾಲ ದರ್ಗಾದಿಂದ ತಲಪಾಡಿ ತನಕ ಕೇರಳ ಯಾತ್ರಾ ನಾಯಕರ ಜತೆ ಸಾಗಿ ಕೇರಳ ಗಡಿ ತಲಪಾಡಿ ಟೋಲ್ ಗೇಟ್ ಬಳಿ ಮದ್ಯಾಹ್ನ 2:00 ಗಂಟೆಗೆ ಕೇರಳ ಯಾತ್ರೆಯ ನಾಯಕರನ್ನು ಗೌರವಿಸುವ ಐಕ್ಯದಾರ್ಢ್ಯ ಸಂಗಮವು ಎಸ್‌ವೈಎಸ್ ದ.ಕ ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯರವರ ನೇತೃತ್ವದಲ್ಲಿ ನಡೆಯಲಿದೆ.
ಸುನ್ನೀ ಸಂಘ ಕುಟುಂಬದ ನಾಯಕರು ಹಾಗೂ ಕಾರ್ಯಕರ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.