ಜ.1-16: ಎ ಪಿ ಉಸ್ತಾದರ ಮೂರನೇ ʼಕೇರಳ ಯಾತ್ರೆʼ
ಉಳ್ಳಾಲ: ಮನುಷ್ಯರೊಂದಿಗೆ ಎಂಬ ಧ್ಯೇಯವಾಕ್ಯದಲ್ಲಿ ಕೇರಳ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಆಯೋಜಿಸಿರುವ ಕೇರಳ ಯಾತ್ರೆಯು ಜನವರಿ 1 ಗುರುವಾರ ಮಧ್ಯಾಹ್ನ 1.30 ಕ್ಕೆ ಉಳ್ಳಾಲ ದರ್ಗಾ ಝಿಯಾರತ್ ನೊಂದಿಗೆ ಪ್ರಾರಂಭವಾಗಲಿದೆ. ಅಂದು ಸಂಜೆ ಕಾಸರಗೋಡು ಜಿಲ್ಲೆಯ ಚೆರ್ಕಳದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ . ಜನವರಿ 16 ರಂದು ತಿರುವನಂತಪುರದಲ್ಲಿ ಸಮಾರೋಪ ಗೊಳ್ಳಲಿದೆ ಎಂದು ದೀವಾನೇ ಖಾಝಿ ಸುನ್ನಿ ಸಂಯುಕ್ತ ಜಮಾಅತ್ ಕರ್ನಾಟಕ ಇದರ ಪ್ರಧಾನ ಕಾರ್ಯದರ್ಶಿ ಎಂ.ಪಿ.ಎಂ ಅಶ್ರಫ್ ಸಅದಿ ಮಲ್ಲೂರು ತಿಳಿಸಿದ್ದಾರೆ.
ಅವರು ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದರು.
ದಿವಾನೇ ಖಾಝಿ ಸುನ್ನೀ ಸಂಯುಕ್ತ ಜಮಾಅತ್ ಕರ್ನಾಟಕ ಇದರ ವ್ಯಾಪ್ತಿಯ 400 ಮೊಹಲ್ಲಾಗಳ ಖಾಝಿ , ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಈ ಯಾತ್ರೆಯ ನೇತೃತ್ವವನ್ನು ವಹಿಸಲಿದ್ದಾರೆ. ಧಾರ್ಮಿಕ ಸೌಹಾರ್ದತೆ, ಮಾನವೀಯ ಏಕತೆ ಮತ್ತು ಭಾವೈಕ್ಯತೆಯನ್ನು ಸಾರುವ ಈ ಯಾತ್ರೆಗೆ ಕೇರಳದ 17 ಕೇಂದ್ರಗಳಲ್ಲಿ ಸ್ವಾಗತ ಸಮಾರಂಭಗಳು ನಡೆಯಲಿವೆ ಎಂದರು.
ಸಮಸ್ತ ಅಧ್ಯಕ್ಷ ಇ ಸುಲೈಮಾನ್ ಮುಸ್ಲಿಯಾರ್, ಕೆ.ಎಸ್ ಆಟಕೋಯ ತಂಙಳ್ ಕುಂಬೋಲ್. ಸಮಸ್ತ ತ್ರಿವರ್ಣ ಧ್ವಜವನ್ನು ಜಾಥಾ ನಾಯಕರಿಗೆ ಹಸ್ತಾಂತರಿಸಲಿದ್ದಾರೆ. ಸಯ್ಯದ್ ಅಲಿ ಬಾಫಖಿ ತಂಙಳ್ ದರ್ಗಾ ಝಿಯಾರತ್‌ಗೆ ನೇತೃತ್ವ ನೀಡಲಿದ್ದಾರೆ.
ಬದ್ರುಸ್ಸಾದಾತ್ ಸಯ್ಯದ್ ಇಬ್ರಾಹಿಂ ಖಲೀಲ್ ತಂಙಳ್, ಶೈಖುನಾ ಪೇರೋಡ್ ಉಸ್ತಾದ್ ಯಾತ್ರೆಯ ಉಪನಾಯಕರಾಗಿರುವರು. ಉಳ್ಳಾಲದಲ್ಲಿ ನಡೆಯುವ ಚಾಲನಾ ಕಾರ್ಯಕ್ರಮದಲ್ಲಿ ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ, ಸ್ಪೀಕರ್ ಯು.ಟಿ ಖಾದರ್, ವೈ. ಅಬ್ದುಲ್ಲ ಕುಂಞಿ ಹಾಜಿ ಯೆನಪೊಯ, ಯು.ಕೆ. ಮೋನು ಹಾಜಿ ಕಣಚೂರು, ಡಾ. ಯು.ಟಿ. ಇಫ್ತಿಕರ್, ಹಾಜಿ ಎಸ್.ಎಂ. ರಶೀದ್, ಇನಾಯತ್ ಅಲಿ, ಬಿ.ಎಂ. ಫಾರೂಕ್, ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಹಾಜಿ, ಶಾಫಿ ಸಅದಿ ಬೆಂಗಳೂರು, ಡಾ ಅಬ್ದು ರಶೀದ್ ಸಖಾಫಿ ಝನಿ, ದೀವಾನೇ ಖಾಝಿ ಕರ್ನಾಟಕ ಉಪಾಧ್ಯಕ್ಷ ಇಸ್ಮಾಯಿಲ್ ತಂಙಳ್ ಉಜಿರೆ, ಅಬೂಬಕ್ಕರ್ ಹಾಜಿ (ರೈಸ್ಕೋ), ಎಸ್. ಮುಹಮ್ಮದ್ ಹಾಜಿ ಸಾಗರ್, ಶಾಕಿರ್ ಹಾಜಿ ಹೈಸಂ, ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್, ದೀವಾನೇ ಖಾಝಿ ಕರ್ನಾಟಕ ಉಪಾಧ್ಯಕ್ಷ ಹುಸೈನ್ ಸಖಾಫಿ ಕೊಡಗು, ಎಸ್.ಕೆ. ಖಾದರ್ ಹಾಜಿ, ಅಬ್ದುರವೂಫ್ ಸುಲ್ತಾನ್ ಗೋಲ್ಡ್, ಹಾರಿಸ್ ಮೆರೈನ್,ಮನ್ಸೂರ್ ಹಾಜಿ ಅಝಾದ್ ಹಾರ್ಡೇರ್, ಅಮೀನ್ ಹಾಜಿ ಎಚ್ ಎಚ್, ಸಿದ್ದೀಖ್ ಹಾಜಿ ಸುಪ್ರೀಂ, ದೀವಾನೇ ಖಾಝಿ ಕರ್ನಾಟಕ ಅಧ್ಯಕ್ಷ ಸಯ್ಯದ್ ಮುತ್ತಾಖು ರಹ್ಮಾನ್ ತಂಙಳ್ ಚಟ್ಟೆಕ್ಕಲ್, ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಶ್ರಫ್ ಸಅದಿ, ಉಪಾಧ್ಯಕ್ಷ ಹುಸೈನ್ ಸಖಾಫಿ ಕೊಡಗು, ಕೋಶಾಧಿಕಾರಿ ಜಲೀಲ್ ಹಾಜಿ ಬೆಂಗಳೂರು ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಸೋಷಿಯಲ್ ಕಾರ್ಯದರ್ಶಿ ದೀವಾನೇ ಖಾಝಿ ಕರ್ನಾಟಕ ಹೈದರ್ ಅಲಿ ಹಿಮಮಿ ಮಲಾರ್ , ಎಜ್ಯುಕೇಷನ್ ಕಾರ್ಯದರ್ಶಿ ದೀವಾನೇ ಖಾಝಿ ಕರ್ನಾಟಕ ಸಿದ್ದೀಖ್ ಸಖಾಫಿ ಮುಡಿಪು, ಕಾರ್ಯದರ್ಶಿ ದೀವಾನೇ ಖಾಝಿ ಕರ್ನಾಟಕ ಬದ್ರುದ್ದೀನ್ ಅಝರಿ ಕೈಕಂಬ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ್ದರು.