×
Ad

ವಿಟ್ಲ: ಕಾರು ಢಿಕ್ಕಿ; ರಿಕ್ಷಾ ಚಾಲಕನಿಗೆ ಗಾಯ

Update: 2023-07-29 22:01 IST

ವಿಟ್ಲ: ಆಟೋ ರಿಕ್ಷಾ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ಆಟೋ ಚಾಲಕ ಗಾಯಗೊಂಡಿರುವ ಘಟನೆ ಸೂರಿಕುಮೇರು ಜಂಕ್ಷನ್ ನಲ್ಲಿ ನಡೆದಿದೆ.

ಅಪಘಾತದಲ್ಲಿ ಆಟೋ ಚಾಲಕ, ಸೂರಿಕುಮೇರ್ ನಿವಾಸಿ ಹನೀಪ್ ಗಾಯಗೊಂಡಿದ್ದಾರೆ.

ರಿಕ್ಷಾ ಸೂರಿಕುಮೇರ್ ಮಾಣಿ ಕಡೆಗೆ ಹಾಗೂ ಕಾರು ಮಂಗಳೂರು ಕಡೆಯಿಂದ ಪುತ್ತೂರಿಗೆ ಚಲಾಯಿಸುತ್ತಿದ್ದಾಗ ಈ ಅವಘಢ ಸಂಭವಿಸಿದೆ.

ಕಾರು ಫರಂಗಿಪೇಟೆಯಲ್ಲಿ ಬೇರೆ ಯಾವೊದೊ ವಾಹನಕ್ಕೆ ಢಿಕ್ಕಿ ಹೊಡೆದು ಬಂದಿರಬಹುದೆಂದು ಶಂಕಿಸಲಾಗಿದ್ದು, ಕಾರಿನಲ್ಲಿ ಮದ್ಯದ ಬಾಟಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ಕಾರಿನ ಚಾಲಕ ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿಯೂ ನಡೆದಿದೆ.

ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News