×
Ad

ಹೈದರಾಬಾದ್‌ನಲ್ಲಿ ನಡೆದ ಪ್ರಕರಣ: ದ.ಕ.ಜಿಲ್ಲೆಯ 5 ಕಡೆ ಎನ್ಐಎ ದಾಳಿ

Update: 2023-08-13 19:27 IST

ಬಂಟ್ವಾಳ : ಹೈದರಾಬಾದ್ ನಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಎನ್ಐಎ ಪೊಲೀಸರು ಬಂಟ್ವಾಳದ ಎರಡು ಮನೆ ಸಹಿತ ದ.ಕ.ಜಿಲ್ಲೆಯಲ್ಲಿ ಒಟ್ಟು 5 ಮಂದಿಯ ಮನೆಗಳಿಗೆ ರವಿವಾರ ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬಂಟ್ವಾಳ ತಾಲೂಕಿನ ಬೋಗೊಡಿ ನಿವಾಸಿ ಇಬ್ರಾಹಿಂ ನಂದಾವರ ಹಾಗೂ ಕುಂಪಣಮಜಲು ನಿವಾಸಿಯಾಗಿದ್ದ ಪ್ರಸ್ತುತ ವಳಚ್ಚಿಲ್ ನಿವಾಸಿಯಾಗಿರುವ ಮುಸ್ತಾಕ್ ಎಂಬವರ ಮನೆಗೆ ದಾಳಿ ನಡೆಸಿದ ಎನ್ಐಎ ಪೋಲೀಸರು ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

ಹೈದರಾಬಾದ್ ನಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News