×
Ad

ಮಂಗಳೂರು | ವಿಳಾಸ ಕೇಳುವ ನೆಪದಲ್ಲಿ ಬಂದಿದ್ದ ಅಪರಿಚಿತರಿಂದ ವೃದ್ಧೆ ಚಿನ್ನದ ಸರ ಕಳವು

Update: 2024-12-13 23:07 IST

ಬಜ್ಪೆ: ವಿಳಾಸ ಕೇಳುವ ನೆಪದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಅಪರಿಚಿತರಿಬ್ಬರು ವೃದ್ಧೆಯೊಬ್ಬರ ಕೊರಳಿನಲ್ಲಿದ್ದ 2.5 ಪವನ್‌ ತೂಕದ ಚಿನ್ನದ ಸರ ಎಗರಿಸಿದ ಘಟನೆ ಬಜ್ಪೆ ಪೊಲೀಸ್‌ ಠಾಣಾ ವ್ಯಾಪ್ತಿಯ ತೆಂಕ ಎಡಪದವು ಗ್ರಾಮದ ಕಣ್ಣೂರಿ ಎಂಬಲ್ಲಿ ಗುರುವಾರ ವರದಿಯಾಗಿದೆ.

ಮಂಗಳೂರು ತಾಲೂಕು ತೆಂಕ ಎಡಪದವು ಗ್ರಾಮದ ಕಣ್ಣೂರಿ ನಿವಾಸಿ ಅನುಸೂಯ ಕಾಜವ (71) ಎಂಬವರ ಚಿನ್ನದ ಸರ ಕಳೆದುಕೊಂಡವರು ಎಂದು ತಿಳಿದು ಬಂದಿದೆ. ಇವರು ಕೆಲಸದ ನಿಮಿತ್ತ ಎಡಪದವಿನಲ್ಲಿರುವ ಕೆನರಾ ಬ್ಯಾಂಕ್‌ ಗೆ ತೆರಳಿ ಅಲ್ಲಿಂದ ತೆಂಕೆ ಎಡಪದವುನಲ್ಲಿರುವ ತನ್ನ ಪರಿಚಯಸ್ಥರೊಬ್ಬರ ಮನೆಯಲ್ಲಿ ನಡೆಯುತ್ತಿದ್ದ ಸತ್ಯನಾರಾಯಣ ಪೂಜೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಅವರ ಹಿಂದಿನಿಂದ ಬಂದ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಅಪರಿಚಿತರು ಶಾಂತಕ್ಕೆ ಏಂಬವರ ಮನೆಯ ವಿಳಾಸ ಕೇಳುವ ನೆಪದಲ್ಲಿ ಅವರ ಕುತ್ತಿಎಗಯಲ್ಲಿದ್ದ ಸುಮಾರು 1.50 ಲಕ್ಷ ರೂ ಮೌಲ್ಯದ 2.5 ಗ್ರಾಂ ತೂಕದ ಚಿನ್ನದ ರಸವನ್ನು ಎಗರಿಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಅನುಸೂಯ ಕಾಜವ ಅವರು ಬಜ್ಪೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ದೂರು ಆಧರಿಸಿ ಪ್ರಕರಣ ದಾಖಲಿಸಕೊಂಡು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News