×
Ad

ವಿದ್ಯಾರ್ಥಿಗಳಿಗೆ ಖಾಸಗಿ ಬಸ್‌ಗಳಲ್ಲಿ ರಿಯಾಯಿತಿದರದ ಚಲೋ ಕಾರ್ಡ್ : ಅಝೀಝ್ ಪರ್ತಿಪ್ಪಾಡಿ

Update: 2025-09-05 09:19 IST

ಮಂಗಳೂರು, ಸೆ.5 : ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ನಾಗರಿಕರಿಗೆ ಉತ್ತಮ ಸಾರಿಗೆ ಸೌಲಭ್ಯವನ್ನು ನೀಡುವುದು ನಮ್ಮ ಗುರಿ. ಮಂಗಳೂರು ನಗರದಲ್ಲಿ ಸಂಚರಿಸುವ ಸುಮಾರು 342 ಸಿಟಿ ಬಸ್ಸುಗಳಲ್ಲಿ 2024-25ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ರಿಯಾಯತಿ ದರದಲ್ಲಿ ಚಲೋ ಕಾರ್ಡುಗಳನ್ನು ವಿತರಿ ಸಲಾಗಿದೆ ಎಂದು ದ.ಕ. ಬಸ್ಸು ಮಾಲಕರ ಸಂಘ (ರಿ)ಮಂಗಳೂರು ಇದರ 2025-26 ನೆ ಸಾಲಿನ ನೂತನ ಅಧ್ಯಕ್ಷ ಅಝೀಝ್ ಪರ್ತಿ ಪಾಡಿ ತಿಳಿಸಿದ್ದಾರೆ.

ನಗರದ "ಮಿಲಾಗ್ರಿಸ್ ಸೆನೆಟ್ ಹಾಲ್" ಸಭಾಂಗಣದಲ್ಲಿ ಅವರು ದ.ಕ. ಬಸ್ಸು ಮಾಲಕರ ಸಂಘ (ರಿ) ಮಂಗಳೂರು, ಇದರ 44ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್ 2024-25 ರ ಸಂಘದ ವಾರ್ಷಿಕ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ಜೊಯೆಲ್ ದಿಲ್‌ರಾಜ್ ಫೆರ್ನಾಂಡಿಸ್ ಲೆಕ್ಕ ಪತ್ರವನ್ನು ಮಂಡಿಸಿದರು. ಕಾರ್ಯದರ್ಶಿ ರಾಜೇಶ್ ಟಿ ವಂದಿಸಿದರು.

ಈಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ದ.ಕ. ಬಸ್ಸು ಮಾಲಕರ ಸಂಘ (ರಿ)ಮಂಗಳೂರು ಇದರ 2025-26 ನೆ ಸಾಲಿನ ಅಧ್ಯಕ್ಷರಾಗಿ ಅಝೀಝ್ ಪರ್ತಿ ಪಾಡಿ, ಉಪಾಧ್ಯಕ್ಷರಾಗಿ ಕೆ.ರಾಮಚಂದ್ರ ನಾಯ್ಕ, ಪ್ರಧಾನ ಕಾರ್ಯದರ್ಶಿಯಾಗಿ ರಾಮಚಂದ್ರ ಪಿಲಾರ್, ಜೊತೆ ಕಾರ್ಯ ದರ್ಶಿಯಾಗಿ ರಾಜೇಶ್ ಟಿ. ಹಾಗೂ ಕೋಶಾಧಿಕಾರಿಯಾಗಿ ಜೋಯಲ್ ದಿಲ್ ರಾಜ್ ಫೆರ್ನಾಂಡಿಸ್ ರವರು ಅವಿರೋಧವಾಗಿ ಪುನರಾಯ್ಕೆಯಾದರು ಹಾಗೂ ಕಾರ್ಯಕಾರಿ ಸಮಿತಿಗೆ 42 ಸದಸ್ಯರನ್ನು ಆಯ್ಕೆ ಮಾಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News