ಚಾರ್ಮಾಡಿ | ಅಝ್ರೀನ್ ಸಿದ್ದೀಕ್ ಸ್ಮರಣಾರ್ಥ ರಕ್ತದಾನ ಶಿಬಿರ
ಚಾರ್ಮಾಡಿ : ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ ಬಾಲಕ ಮರ್ಹೂಮ್ ಅಝ್ರೀನ್ ಸಿದ್ದೀಕ್ ಇವರ ಸ್ಮರಣಾರ್ಥದ ಭಾಗವಾಗಿ ಹಯಾತುಲ್ ಇಸ್ಲಾಂ ಮದರಸ ಬೀಟಿಗೆ ಹಾಗೂ ಮರ್ಹೂಂ ಹೈದರ್ ನಿರ್ಸಾಲ್ ಬ್ಲಡ್ ಡೋನರ್ಸ್ ಫಾರಂ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಸಂಯುಕ್ತಾಶ್ರಯದಲ್ಲಿ ಯೇನಪೋಯ ಆಸ್ಪತ್ರೆ ಇವರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಕಕ್ಕಿಂಜೆಯ ಬೀಟಿಗೆ ಮದರಸ ವಠಾರದಲ್ಲಿ ನಡೆಯಿತು.
ಅಹ್ಮದ್ ಕುಂಞ ಮುಸ್ಲಿಯಾರ್ ದುವಾ ಆಶೀರ್ವಾದದೊಂದಿಗೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ ಖಾದರ್ ವಹಿಸಿದ್ದರು.
ಅಹ್ಮದ್ ಕುಂಞ ಮುಸ್ಲಿಯಾರ್ ದುವಾ ಆಶೀರ್ವಾದದೊಂದಿಗೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ ಖಾದರ್ ವಹಿಸಿದ್ದರು. ರಫೀಕ್ ಫೈಝಿ ಖತೀಬರು ಜಲಾಲಿಯನಗರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ತೌಸೀಫ್ ಫೈಝಿ ಖತೀಬರು ಇಸ್ಲಾಂಬಾದ್ ಹಾಗೂ ಅಕ್ಟರ್ ಬೆಳ್ತಂಗಡಿ ಅಧ್ಯಕ್ಷರು ಎಸ್‌ಡಿಪಿಐ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ರಕ್ತದಾನ ಮಹತ್ವದ ಕುರಿತು ಮಾತುಗಳನ್ನಾಡಿದರು.
ವೇದಿಕೆಯಲ್ಲಿ ಸ್ವದಕತ್ ದಾರಿಮಿ ಕತ್ತರಿಗುಡ್ಡೆ, ಅಬೂಬಕ್ಕರ್ ಮುಸ್ಲಿಯಾರ್, ಉಮರ್ ಮುಸ್ಲಿಯಾರ್, ಹಾರಿಸ್ ಹನೀಫಿ, ಮುಸ್ತಫಾ ಜಿ.ಕೆ., ಹಕೀಮ್ ಜಿ.ಕೆ., ಉಸ್ಮಾನ್ ಕಲ್ಲಡ್ಕ, ಇಸ್ಮಾಯಿಲ್, ಇಸ್ಮಾಯಿಲ್ ಕೆ., ಸಿದ್ದೀಕ್ ಯು. ಪಿ., ಹಾಜಿ ಸುಲೈಮಾನ್, ಅಬ್ದುಲ್ ಖಾದರ್ (ಮೋನಾಕ), ಡಾಕ್ಟರ್ಸ್ ಮತ್ತು ಸಿಬ್ಬಂದಿಗಳು ಯೆನೋಪೊಯಾ ಆಸ್ಪತ್ರೆ ಮಂಗಳೂರು, ಅಹಮ್ಮದ್ ಕುಂಞ ಮುಸ್ಲಿಯಾರ್ ಬೀಟಿಗೆ, ಪಕೀರಬ್ಬ ಯು.ಪಿ, ರಫೀಕ್ ಯು. ಪಿ. ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಅಶ್ರಫ್ ಚಾರ್ಮಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.
ರಕ್ತದಾನ ಶಿಬಿರದಲ್ಲಿ ದಾನಿಗಳಿಂದ ಒಟ್ಟು ಎಪ್ಪತ್ತೈದು ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.