×
Ad

ವಿಶ್ವಕರ್ಮ ಸಹಕಾರ ಬ್ಯಾಂಕ್‌ನಿಂದ ಸ್ವಚ್ಛತಾ ಕಾರ್ಯಕ್ರಮ

Update: 2026-01-05 18:48 IST

ಮಂಗಳೂರು, ಜ.5: ನಮ್ಮಲ್ಲಿ ಕಸ ಎಸೆಯುವ ಮನಸ್ಥಿತಿಯನ್ನು ಬದಲಾಯಿಸಬೇಕಾದರೆ ಸಾರ್ವಜನಿಕವಾಗಿ ಕಸ ಹೆಕ್ಕುವ ಸಂಪ್ರದಾಯ ಮೂಡಿ ಅದು ಸಾರ್ವತ್ರಿಕವಾಗಬೇಕು. ಪೋಷಕರು ಪ್ರತೀ ಮನೆಗಳಲ್ಲಿ ಮಕ್ಕಳಿಗೆ ಸಣ್ಣ ಪ್ರಾಯದಲ್ಲಿ ಸ್ವಚ್ಛತೆಯ ಅರಿವನ್ನು ಮೂಡಿಸುವ ಕಾರ್ಯವನ್ನು ಮಾಡಬೇಕಾಗಿದೆ. ಈ ಮೂಲಕ ಮುಂದಿನ ಜಾಗೃತ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ಅವೇಕ್ ಕುಡ್ಲಾದ ಸಂಚಾಲಕ ಉಮಾನಾಥ್ ಕೋಟೆಕಾರ್ ಹೇಳಿದರು.

ವಿಶ್ವಕರ್ಮ ಸಹಕಾರ ಬ್ಯಾಂಕ್‌ನ ಮಂಗಳೂರು ಶಾಖೆಯ ಆಶ್ರಯದಲ್ಲಿ ಸ್ವಚ್ಛತಾ ಹೀ ಸೇವಾ ಧ್ಯೇಯದೊಂದಿಗೆ ಮರೋಳಿಯ ಬಾಕಿಮಾರು ಜಂಕ್ಷನ್, ಯಮುನಾ ರೆಸಿಡೆನ್ಸಿ, ಸೂರ್ಯನಾರಾಯಣ ದೇವಸ್ಥಾನ ರಸ್ತೆ, ಜಯನಗರ ರಸ್ತೆ ಪರಿಸರಗಳಲ್ಲಿ ನಡೆದ ಹದಿನಾರನೇ ಸ್ವಚ್ಛ ಭಾರತ ಶ್ರಮದಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪತ್ರಕರ್ತ ಗುರುಪ್ರಸಾದ್ ಎಸ್, ವಿಶ್ವಕರ್ಮ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಡಾ.ಎಸ್.ಆರ್.ಹರೀಶ್ ಆಚಾರ್ಯ, ಮಾಜಿ ಕಾರ್ಪೊರೇಟರ್ ಕೇಶವ ಮಾರೋಳಿ, ಯಮುನಾ ರೆಸಿಡೆನ್ಸಿ ಕಟ್ಟಡ ಮಾಲಕರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ, ಎಸ್.ಸಿ. ವರ್ಮ ಶ್ರಮದಾನಕ್ಕೆ ಚಾಲನೆ ನೀಡಿದರು.

ವಿಶ್ವಕರ್ಮ ಸಹಕಾರ ಬ್ಯಾಂಕಿನ ನಿರ್ದೇಶಕ ಹರಿಪ್ರಸಾದ್, ವ್ಯವಸ್ಥಾಪಕ ನಿರ್ದೇಶಕ ವಸಂತ ಅಡ್ಯಂತಾಯ, ದ.ಕ. ಚಿನ್ನದ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಹಳೇಜಿ, ಸಾಮಾಜಿಕ ಕಾರ್ಯಕರ್ತ ಅರುಣ್ ಶೆಟ್ಟಿ ಮರೋಳಿ, ಭಾಸ್ಕರ ದೇವಾಡಿಗ, ಯಮುನಾ ರೆಸಿಡೆನ್ಸಿ ಕಟ್ಟಡ ಮಾಲಕರ ಸಂಘದ ಪದಾಧಿಕಾರಿಗಳಾದ ರಾಧಾಕೃಷ್ಣ ರೈ, ಸಂಜೀವ ರೈ, ಪುರಂದರ ಶೆಟ್ಟಿ, ಡಾ. ಮಹೇಶ್ ಶೇಣವ, ಮಂಜುನಾಥ್ ಕುಲಕರ್ಣಿ, ಬಾಲಕೃಷ್ಣ ಶೆಟ್ಟಿ, ವಾಣಿ ರೈ, ಮಮತಾ ರೋಹಿತ್ ರಾಜ್ ಮತ್ತಿತರರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News