×
Ad

ಕಾಲೇಜು ವಿದ್ಯಾರ್ಥಿನಿ ನಾಪತ್ತೆ

Update: 2023-11-16 22:16 IST

ಮಂಗಳೂರು: ನಗರ ಹೊರವಲಯದ ಕುಳೂರು ಸಮೀಪದ ಪಂಜಿಮೊಗರು ನಿವಾಸಿ, ಕಾಲೇಜು ವಿದ್ಯಾರ್ಥಿನಿ ಲಿಖಿತಾ (19) ಎಂಬವರು ನಾಪತ್ತೆಯಾಗಿರುವ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ಪದವಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿರುವ ಈಕೆ ನ.11ರಂದು ಎಂದಿನಂತೆ ಕಾಲೇಜು ಹೋಗಿದ್ದರು. ಆದರೆ ಮರಳಿ ಬಾರದೆ ನಾಪತ್ತೆಯಾಗಿದ್ದಾರೆ. ಅದೇ ದಿನ ರಾತ್ರಿ ಮನೆಗೆ ಪೋನ್ ಮಾಡಿ ತಾನು ಸುರಕ್ಷಿತವಾಗಿದ್ದು, ಮೂರು ದಿನದೊಳಿಗೆ ವಾಪಸ್ ಮನೆಗೆ ಬರುವುದಾಗಿ ಹೇಳಿದ್ದಾರೆ. ಆದರೆ 6 ದಿನಗಳಾದರೂ ಮನಗೆ ವಾಪಸ್ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News