×
Ad

ಕೊಳತ್ತಮಜಲು | 5 ತಿಂಗಳ ಹಿಂದೆ ಧಾರ್ಮಿಕ ಪ್ರವಚಕರೊಬ್ಬರ ಮೇಲೆ ಕಲ್ಲೆಸೆದಿದ್ದ ಆರೋಪಿಯ ವಿರುದ್ಧ ದೂರು: ಪ್ರಕರಣ ದಾಖಲು

Update: 2025-05-31 22:10 IST

ಮಂಗಳೂರು: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲು ಎಂಬಲ್ಲಿ ಐದು ತಿಂಗಳ ಹಿಂದೆ ನಡೆದ ಕಲ್ಲೆಸೆತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2024ರ ಡಿಸೆಂಬರ್ 29ರಂದು ಮಧ್ಯಾಹ್ನ ಉಪ್ಪಿನಂಗಡಿಯ ಸಿನಾನ್ ಫೈಝಿ ಕೊಳತ್ತಮಜಲಿನಲ್ಲಿ ಧಾರ್ಮಿಕ ಪ್ರವಚನ ಮುಗಿಸಿ ಅವರ ಬೈಕ್‌ನಲ್ಲಿ ಉಪ್ಪಿನಂಗಡಿ ತೆರಳುತ್ತಿದ್ದಾಗ ಆರೋಪಿ ತೇಜಾಕ್ಷ ಎಂಬಾತನು ಹಿಂದಿನಿಂದ ಕಲ್ಲೆಸೆದಿದ್ದ. ಸಿನಾನ್ ಫೈಝಿ ಪ್ರಾಣಾಪಯದಿಂದ ತಪ್ಪಿಸಿಕೊಂಡಿದ್ದರು. ಆರೋಪಿತನ ಬಗ್ಗೆ ಭಯವಿದ್ದ ಕಾರಣ ದೂರು ನೀಡಿರಲಿಲ್ಲ. ಇದೀಗ ಬಡಗಬೆಳ್ಳೂರಿನ ಶಮೀರ್ ಈ ಬಗ್ಗೆ ದೂರು ನೀಡಿದ್ದಾರೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News