ಮಾನವ ಜನಾಂಗದ ಉಳಿವಿಗೆ ಪ್ರಕೃತಿಯ ಸಂರಕ್ಷಣೆ ಅತೀ ಅಗತ್ಯ: ಪ್ರೊ. ಪಿ.ಎಲ್.ಧರ್ಮ
ಮಂಗಳೂರು: ಮಾನವ ಜನಾಂಗದ ಉಳಿವಿಗೆ ಪ್ರಕೃತಿಯ ಸಂರಕ್ಷಣೆ ಅತೀ ಅಗತ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪಿ.ಎಲ್.ಧರ್ಮ ತಿಳಿಸಿದ್ದಾರೆ.
ಅವರು ಗುರುವಾರ ರೈತ ಕುಡ್ಲ ಪ್ರತಿಷ್ಠಾನ, ಗಾಂಧಿ ಶಿಲ್ಪ ಬಜಾರ್ ,ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಪುತ್ತೂರು ಇವರ ಸಂಯಕ್ತ ಆಶ್ರಯದಲ್ಲಿ ಪಿಲಿಕುಳ ಉದ್ಯಾನವನದಲ್ಲಿ ಹಮ್ಮಿಕೊಂಡ ಪಿಲಿಕುಳ ಪರ್ಬ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಪ್ರಾಣಿ ಪಕ್ಷಿಗಳ ಆಶ್ರಯ ತಾಣವಾದ ಈ ಸಂದರ ಪ್ರಕೃತಿಯನ್ನು ಸಂರಕ್ಷಿಸದೆ ಇದ್ದರೆ ಮುಂದೆ ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಈ ಬಗ್ಗೆಎಚ್ಚರ ವಹಿಸಬೇಕಾಗಿದೆ ಎಂದು ಪ್ರೊ.ಧರ್ಮ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ವಚ್ಚತಾ ಜಿಲ್ಲಾ ರಾಯಭಾರಿ ಶೀನ ಶೆಟ್ಟಿ ಮಾತನಾಡುತ್ತಾ, ಪರಿಸರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಯಾವ ರೀತಿ ನಮ್ಮ ಬದುಕಿಗೆ ಮಾರಕವಾಗಿದೆ ಈ ಸಮುದಾಯದಲ್ಲಿ ಜಾಗೃತಿ ಅಗತ್ಯ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಸಮಾಜ ಸೇವಕರಾದ ಶೀನ ಶೆಟ್ಟಿ ಮತ್ತು ಕೃಷ್ಣ ಮೂಲ್ಯ ಮತ್ತು ಟೆರೇಸ್ ಮೂಲಕ ಭತ್ತದ ಹಲವು ತಳಿಗಳ ಕೃಷಿ ಮಾಡಿ ರಾಷ್ಟ ಅಂತರಾಷ್ಟ್ರೀಯ ಗಮನ ಸೆಳೆದ ಕೃಷಿಕ ಕೃಷ್ಣಪ್ಪ ಗೌಡ ಪಡ್ಡಂಬೈಲು ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕಿಶೋರ್ ಆಳ್ವ,ಜನರಲ್ ಮ್ಯಾನೇ ಜರ್ ರವಿ ಜೇರಾ,ಮೂಡಾ ಆಯುಕ್ತ ಮುಹಮ್ಮದ್ ನಸೀರ್,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್, ಮೀನುಗಾರಿಕಾ ಕಾಲೇಜಿನ ಪ್ರೊ.ಶಿವ ಪ್ರಕಾಶ್,ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯ ಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದರು.
ಕುಡ್ಲ ರೈತ ಪ್ರತಿಷ್ಠಾನದ ಅಧ್ಯಕ್ಷ ಭರತ್, ಲತೀಶ್ ,ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮುಖ್ಯ ಕಾರ್ಯದರ್ಶಿ ಜನಾರ್ದನ ಎಸ್ ಮೂಲ್ಯ ಉಪಸ್ಥಿತರಿದ್ದರು.