ಬಂಟ್ವಾಳ ತಾಲೂಕಿನಲ್ಲಿ ಮುಂದುವರಿದ ಮಳೆ; ಹೆಚ್ಚಿದ ಹಾನಿ ಪ್ರಕರಣ
Update: 2025-07-19 13:05 IST
ಬಂಟ್ವಾಳ : ತಾಲೂಕಿನಲ್ಲಿ ನಿರಂತರ ಮಳೆ ಅಬ್ಬರದ ನಡುವೆಯೇ ಮಳೆ ಹಾನಿ ಪ್ರಕರಣಗಳೂ ಮುಂದುವರಿದಿವೆ.
ಗೋಳ್ತಮಜಲು ಗ್ರಾಮದ ಅಂಗನತ್ತಾಯ ದೈವಸ್ಥಾನದ ಬದಿಯ ತಡೆಗೋಡೆ ಕುಸಿದಿದೆ. ಬಡಗಬೆಳ್ಳೂರು ಗ್ರಾಮದ ನಿವಾಸಿ ಸೀತಾ ಅವರ ಮನೆಗೆ ಹಾನಿಯಾಗಿದೆ. ಕಡೇಶ್ವಾಲ್ಯ ಗ್ರಾಮದ ನಿವಾಸಿ ಕುಶಾಲಪ್ಪ ನಾಯ್ಕ ಬಿನ್ ವೆಂಕಪ್ಪ ನಾಯ್ಕ ಅವರ ವಾಸ್ತವ್ಯದ ಮನೆ ಮೇಲೆ ಬರೆ ಜರಿದು ಭಾಗಶಃ ಹಾನಿ ಸಂಭವಿಸಿದೆ.
ರಾಯಿ ಗ್ರಾಮದ ಹೊರಂಗಳ ನಿವಾಸಿ ಲೀಲಾ ವಿಶ್ವನಾಥ ಕುಲಾಲ ಅವರ ಮನೆಗೆ ತಡರಾತ್ರಿ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಕೊಯಿಲ ಗ್ರಾಮದ ಕೊಯಿಲ ಕ್ವಾಟ್ರಸ್ ನಿವಾಸಿ ಹರೀಶ್ ಪೂಜಾರಿ ಅವರ ಮನೆಯ ಹಿಂಬದಿಗೆ ಭಾಗಶಃ ಹಾನಿಯಾಗಿದೆ.
ಗೋಳ್ತಮಜಲು ಗ್ರಾಮದ ಅಬ್ದುಲ್ ಖಾದರ್ ಅವರ ಮನೆ ಬದಿಯ ತಡೆಗೋಡೆ ಬಿದ್ದು ಮನೆಗೆ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ.