×
Ad

ಮಿಲಾಗ್ರಿಸ್ ಕಾಲೇಜಿನಲ್ಲಿ ಶಿಕ್ಷಕರ ಸಬಲೀಕರಣ ಕಾರ್ಯಾಗಾರ

Update: 2026-01-21 14:47 IST

ಮಂಗಳೂರು, ಜ.21: ಹಂಪನಕಟ್ಟೆಯ ಮಿಲಾಗ್ರಿಸ್ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಹಾಗೂ ಸೈಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ, ‘ಬೋಧನೆ ಮತ್ತು ಮಾಧ್ಯಮದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮೂಲಕ ಶಿಕ್ಷಕರ ಸಬಲೀಕರಣ’ ಎಂಬ ವಿಷಯದ ಕುರಿತು ಶಿಕ್ಷಕರಿಗಾಗಿ ಒಂದು ದಿನದ ಕಾರ್ಯಾಗಾರವನ್ನು ಮಂಗಳವಾರ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಮೊದಲ ಗೋಷ್ಠಿಯಲ್ಲಿ ಮಂಗಳೂರಿನ ಸೈಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಮಾಧ್ಯಮ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಯೂಸಫುಲ್ ಅರ್ಶದ್ ಮಾತನಾಡಿ, ಬೋಧನೆ–ಕಲಿಕಾ ಪ್ರಕ್ರಿಯೆ ಹಾಗೂ ದಿನನಿತ್ಯದ ಶೈಕ್ಷಣಿಕ ಬದುಕಿನಲ್ಲಿ ಕೃತಕ ಬುದ್ಧಿಮತ್ತೆ (ಎಐ) ಪರಿಕರಗಳ ಪರಿಣಾಮಕಾರಿ ಬಳಕೆಯ ಕುರಿತು ವಿವರಿಸಿದರು.

ಎರಡನೇ ಅವಧಿಯಲ್ಲಿ ಸೈಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಮಾಧ್ಯಮ ಅಧ್ಯಯನ ವಿಭಾಗದ ಪ್ರಾಧ್ಯಾಪಕ ವಿಲ್ಸನ್ ಪಿರೇರಾ ಮಾತನಾಡಿ, ಕೃತಕ ಬುದ್ಧಿಮತ್ತೆಯ ಸಾಧಕ–ಬಾಧಕಗಳ ಬಗ್ಗೆ ಮಾಹಿತಿ ನೀಡಿದರು.

ಮೂರನೇ ಗೋಷ್ಠಿಯಲ್ಲಿ ಅದೇ ವಿಭಾಗದ ಪ್ರಾಧ್ಯಾಪಕ ವಿಶಾಲ್ ನಾಯಕ್ ಅವರು, ಕಾಲೇಜುಗಳ ಮಾಧ್ಯಮ ಶಿಕ್ಷಣದಲ್ಲಿ ಎಐ ಪರಿಕರಗಳನ್ನು ಸಂಯೋಜಿಸುವ ಕುರಿತು ಪ್ರಾಯೋಗಿಕ ತರಬೇತಿ ನೀಡಿದರು.

ಕಾರ್ಯಕ್ರಮದ ಸಂಯೋಜಕರಾದ ಅಂಜು ಎಲ್ಸಾ ಥಾಮಸ್ ಹಾಗೂ ಉಪಪ್ರಾಂಶುಪಾಲೆ ಗ್ಲಾನ್ಸಿಯಾ ಫರ್ನಾಂಡಿಸ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರು ಹಾಗೂ ಕ್ಯಾಂಪಸ್ ನಿರ್ದೇಶಕರಾದ ರೆ. ಡಾ. ಆಲ್ವಿನ್ ಸೆರಾವೊ ಸ್ವಾಗತಿಸಿದರು. ಪ್ರತಿಭಾ ಕಾರ್ಯಕ್ರಮ ನಿರೂಪಿಸಿದರು. ಐಕ್ಯೂಎಸಿ ಸಂಯೋಜಕಿ ಚೇತನ ವಂದಿಸಿದರು.

 

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News