ಎಂಸಿಸಿ ಬ್ಯಾಂಕಿನಲ್ಲಿ ಸೈಬರ್ ಭದ್ರತಾ ಜಾಗೃತಿ ಕಾರ್ಯಕ್ರಮ
ಮಂಗಳೂರು : ಎಂಸಿಸಿ ಬ್ಯಾಂಕ್ ತನ್ನ ಅರ್ಧ ವಾರ್ಷಿಕ ಕಾರ್ಯಕ್ಷಮತೆ ವಿಮರ್ಶೆ ಮತ್ತು ಸೈಬರ್ ಭದ್ರತಾ ಜಾಗೃತಿ ಕಾರ್ಯಕ್ರಮ ‘ಸೈಬರ್ ಸೇಫ್ ಬ್ಯಾಂಕ್’’ ಎಂಬ ಶೀರ್ಷಿಕೆಯೊಂದಿಗೆ ನ.8ರಂದು ಮಂಗಳೂರಿನ ಆಡಳಿತ ಕಚೇರಿಯ ಪಿ.ಎಫ್.ಎಕ್ಸ್. ಸಲ್ಡಾನಾ ಸ್ಮಾರಕ ಸಭಾಂಗಣದಲ್ಲಿ ನಡೆಯಿತು.
ಬ್ಯಾಂಕಿನ ಅಧ್ಯಕ್ಷ ‘ಸಹಕಾರ ರತ್ನ’ ಅನಿಲ್ ಲೋಬೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬೋಂದೆಲ್‌ನ ಸೈಂಟ್ ಲಾರೆನ್ಸ್ ಚರ್ಚಿನ ಧರ್ಮಗುರು ವಂ. ಫಾ.ಆಂಡ್ರ್ಯೂ ಲಿಯೋ ಡಿ ಸೋಜ ಮುಖ್ಯ ಅತಿಥಿಯಾಗಿದ್ದರು. ಡಾ.ಅನಂತ್ ಪ್ರಭು, ಬ್ಯಾಂಕಿನ ಮಹಾಪ್ರಬಂಧಕ ಸುನಿಲ್ ಮಿನೇಜಸ್ ವೇದಿಕೆಯಲ್ಲಿ ಹಾಜರಿದ್ದರು.
ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅವರು ತಮ್ಮ ಸಮರ್ಪಿತ ಪ್ರಯತ್ನಗಳಿಂದ ಗುರಿಗಳನ್ನು ಸಾಧಿಸಿದ ಬ್ಯಾಂಕಿನ ಶಾಖಾ ಸಿಬ್ಬಂದಿಯನ್ನು ಅಭಿನಂದಿಸಿದರು.
ಬ್ಯಾಂಕಿನ ಪ್ರಗತಿಗೆ ಅಡ್ಡಿಯಾಗುವ ಸಮಸ್ಯೆಗಳನ್ನು ಪರಿಹರಿಸುವ ಅಗತ್ಯವನ್ನು ಅವರು ಒತ್ತಿ ಹೇಳಿ ನಿರಂತರ ಬೆಳವಣಿಗೆಯನ್ನು ಸಾಧಿಸಲು ಸ್ಥಳೀಯ ಸಮುದಾಯದೊಂದಿಗೆ ವಿಶ್ವಾಸವನ್ನು ಬಲಪಡಿಸಲು ಮತ್ತು ಆಳವಾದ ಸಂಪರ್ಕವನ್ನು ನಿರ್ಮಿಸಲು ಬ್ಯಾಂಕಿನ ಸಾರ್ವಜನಿಕ ಸಂಪರ್ಕ ಪ್ರಯತ್ನಗಳನ್ನು ಹೆಚ್ಚಿಸಲು ಅಧ್ಯಕ್ಷ ಅನಿಲ್ ಲೋಬೊ ಸಲಹೆ ನೀಡಿದರು.
ವಂ. ಫಾ. ಆಂಡ್ರ್ಯೂ ಲಿಯೋ ಡಿ ಸೋಜ , ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ.ಅನಂತ್ ಪ್ರಭು ಅವರು ಸೈಬರ್ ಸುರಕ್ಷತಾ ಅಧಿವೇಶನವನ್ನು ನಡೆಸಿದರು.
ಉಪ ಪ್ರಧಾನ ವ್ಯವಸ್ಥಾಪಕ ರಾಜ್ ಮಿನೇಜಸ್ ಮತ್ತು ಪ್ರಧಾನ ವ್ಯವಸ್ಥಾಪಕ ಸುನಿಲ್ ಮಿನೇಜಸ್ ಅವರು ಸಿಬ್ಬಂದಿ ಮಾಡುವ ಪುನರಾವರ್ತಿತ ತಪ್ಪುಗಳನ್ನು ವಿವರಿಸಿದರು.
ಬ್ಯಾಂಕಿನ ಸಲಹೆಗಾರ ಎಸ್.ಎಚ್.ವಿಶ್ವೇಶ್ವರಯ್ಯ ಅವರು ಸೆ.30ಕ್ಕೆ ಕೊನೆಗೊಂಡ ಅವಧಿಗೆ ಅರ್ಧ ವಾರ್ಷಿಕ ವರದಿ ಮಂಡಿಸಿದರು.
ನಿರ್ದೇಶಕ ಹೆರಾಲ್ಡ್ ಮೊಂತೇರೊ, ರೋಶನ್ ಡಿ ಸೋಜ, ಮೆಲ್ವಿನ್ ವಾಸ್, ಫೆಲಿಕ್ಸ್ ಡಿ’ಕ್ರೂಜ್, ಕ್ರೆಡಿಟ್ ಸಲಹೆಗಾರ ಸೆಲೆಸ್ಟೀನ್ ಲೀನಾ ಮೊಂತೇರೋ, ಐಟಿ ಸಲಹೆಗಾರ ರೋಶನ್ ಮಾಡ್ತಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಸುನೀಲ್ ಮಿನೇಜಸ್ ಅವರು ವಂದಿಸಿದರು. ಕಂಕನಾಡಿ ಶಾಖೆಯ ಕ್ರೆಡಿಟ್ ಅಧಿಕಾರಿ ಸ್ಟೀವನ್ ಡಿ ಸಿಲ್ವಾ ಕಾರ್ಯಕ್ರಮವನ್ನು ನಿರೂಪಿಸಿದರು.