ದೇರಳಕಟ್ಟೆ : ಕೆ.ಎಸ್ ಹೆಗ್ಡೆ ಅಸ್ಪತ್ರೆ, ಜನಪ್ರಿಯ ಆಸ್ಪತ್ರೆ ವತಿಯಿಂದ ರಕ್ತದಾನ ಶಿಬಿರ, ಉಚಿತ ಆರೋಗ್ಯ ಶಿಬಿರ
ದೇರಳಕಟ್ಟೆ: ಕೆ.ಎಸ್ ಹೆಗ್ಡೆ ಅಸ್ಪತ್ರೆ ವತಿಯಿಂದ ರಕ್ತದಾನ ಶಿಬಿರ ಹಾಗೂ ಜನಪ್ರಿಯ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ಶಿಬಿರ ದೇರಳಕಟ್ಟೆ ಸ್ವಾಗತ್ ಆಡಿಟೋರಿಯಂ ನಲ್ಲಿ ನಡೆಯಿತು.
ಸಯ್ಯಿದ್ ಅಲಿ ತಂಙಳ್ ಕುಂಬೋಲ್ ಉದ್ಘಾಟಿಸಿದರು. ಸಯ್ಯಿದ್ ಶರಫುದ್ದೀನ್ ತಂಙಳ್ ದುಆ ನೆರವೇರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಸಹಾಯಕ ಹಾಗೂ ಆರೋಗ್ಯ ಮಂಡಳಿಯ ಅಧ್ಯಕ್ಷರಾದ ಡಾ. ಯು.ಟಿ. ಇಫ್ತಿಖಾರ್ ಅಲಿ, ದೇರಳಕಟ್ಟೆ ಬದ್ರಿಯ ಜುಮಾ ಮಸೀದಿ ಖತೀಬ್ ತಾಜುದ್ದೀನ್ ರಹ್ಮಾನಿ, ಕಾನೆಕೆರೆ ತಾಜುಲ್ ಉಲಮಾ ಮಸೀದಿ ಖತೀಬ್ ಇಸ್ಹಾಕ್ ಝುಹ್ರಿ, ಕುಂಡೂರು ಮಸೀದಿ ಖತೀಬ್ ಅಶ್ರಫ್ ಫೈಝಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೊಳಿಯಾರ್, ಅಶ್ರಫ್ ಅಬೂಬಕ್ಕರ್, ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಮೋನು, ರತ್ನ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಬೆಳ್ಮ ಗ್ರಾ.ಪಂ ಸದಸ್ಯ ಇಕ್ಬಾಲ್ ಎಚ್.ಆರ್, ತಾಜುಲ್ ಉಲಮಾ ಟ್ರಸ್ಟಿ ಏಷ್ಯನ್ ಅಹ್ಮದ್ ಹಾಜಿ, ಜನಪ್ರಿಯ ಆಸ್ಪತ್ರೆಯ ಡಾ. ನುಹ್ಮಾನ್, ಉದ್ಯಮಿ ಸಿಎಂ ಫಾರೂಕ್, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸದಸ್ಯ ಡಿಎ ಅಶ್ರಫ್, ಎಸ್‌ಡಿ ಪಿಐ ಮುಖಂಡ ಝಾಹೀದ್ ಮಲಾರ್, ಬೆಳ್ಮ ಗ್ರಾ.ಪಂ ಮಾಜಿ ಅಧ್ಯಕ್ಷ ಅಕ್ಸಾ ಉಸ್ಮಾನ್ , ಸ್ವಾಗತ್ ಆಡಿಟೋರಿಯಂ ಮಾಲಿಕ ಅಬೂಬಕ್ಕರ್ ಹಾಜಿ ಸ್ವಾಗತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.