Deralakatte | ಅಡ್ಕರೆಪಡ್ಪುವಿನಲ್ಲಿ ‘ಗ್ರೀನೋವೇಟ್–2025’ ವಿಜ್ಞಾನ ಮೇಳ
ಮಂಗಳೂರು : ಜಮಿಯ್ಯತುಲ್ ಫಲಾಹ್ ಗ್ರೀನ್ ವ್ಯೂ ವಿದ್ಯಾ ಸಂಸ್ಥೆ ಅಡ್ಕರೆಪಡ್ಪುವಿನಲ್ಲಿ ‘ಗ್ರೀನೋವೇಟ್–2025’ ATL ಮತ್ತು ರೊಬೋಟಿಕ್ಸ್ ವಿಜ್ಞಾನ ಮೇಳವನ್ನು ಆಯೋಜಿಸಲಾಯಿತು.
ಉದ್ಘಾಟನಾ ಕಾರ್ಯಕ್ರಮವನ್ನು ಯೆನೆಪೋಯ ಸೆಂಟರ್ ಫಾರ್ ಅಡ್ವಾನ್ಸ್ಡ್ ಲರ್ನಿಂಗ್ ನಿರ್ದೇಶಕ ಪ್ರೊ.ಸಿನಾನ್ ಝಕಾರಿಯಾ ಉದ್ಘಾಟಿಸಿದರು.
ಕಲಾ ವಸ್ತು ಪ್ರದರ್ಶನವನ್ನು ಜಮಿಯ್ಯತುಲ್ ಫಲಾಹ್ ಜಿಲ್ಲಾಧ್ಯಕ್ಷರಾದ ಅಶ್ಫಾಕ್ ಅಹ್ಮದ್ ಕಾರ್ಕಳ, ಸಾಹಿತ್ಯ ವಸ್ತು ಪ್ರದರ್ಶನವನ್ನು ಜಮಿಯ್ಯತುಲ್ ಫಲಾಹ್ NRU ಮುಖ್ಯಸ್ಥ ಅಶ್ಫಾಕ್ ಅಹ್ಮದ್ ಹಾಗೂ ಗಣಿತ ವಸ್ತು ಪ್ರದರ್ಶನವನ್ನು ಜಿಲ್ಲಾಕೋಶಾಧಿಕಾರಿ ಅಬ್ದು ನಾಸಿರ್ ಕೆ.ಕೆ. ಉದ್ಘಾಟಿಸಿದರು.
ಮುಖ್ಯ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಸೇರಿದಂತೆ ಜಮಿಯ್ಯತುಲ್ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮುಖ್ಯ ಅತಿಥಿಗಳ ಹಾಗೂ ಪದಾಧಿಕಾರಿಗಳ ಸ್ವಾಗತವನ್ನು ಸಂಚಾಲಕ ಪರ್ವೇಜ್ ಅಲಿ ನಿರ್ವಹಿಸಿದರು. ಪ್ರಾಂಶುಪಾಲ ಅಬೂಬಕ್ಕರ್ ಕೆ. ಕಾರ್ಯಕ್ರಮವನ್ನು ನಿರೂಪಿಸಿದರು. ಅಟಲ್ ಟಿಂಕರಿಂಗ್ ಕನ್ವೀನರ್ ಖಲೀಲ್ ಇಬ್ರಾಹಿಂ ಧನ್ಯವಾದ ಅರ್ಪಿಸಿದರು.