×
Ad

ದೇರಳಕಟ್ಟೆ | ಅಂತರರಾಷ್ಟ್ರೀಯ ವಿಶೇಷ ಚೇತನ ಮಕ್ಕಳ ದಿನಾಚರಣೆ

Update: 2025-12-03 18:06 IST

ದೇರಳಕಟ್ಟೆ: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಎ ಬಿ ಶಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ , ನಿಟ್ಟೆ ವಿಶೇಷ ಚೇತನ ಮಕ್ಕಳ ಆರೈಕೆ ಕೇಂದ್ರ ಹಾಗೂ ಪೀಡಿಯಾಟ್ರಿಕ್ ಮತ್ತು ಪ್ರಿವೆಂಟಿವ್ ಡೆಂಟಿಸ್ಟ್ರಿ ವಿಭಾಗ ಇವುಗಳ ಆಶ್ರಯದಲ್ಲಿ ಅಂತರರಾಷ್ಟ್ರೀಯ ವಿಶೇಷ ಚೇತನ ಮಕ್ಕಳ ದಿನಾಚರಣೆ ಪ್ರಯುಕ್ತ ವಿಶೇಷ ಚೇತನ ಮಕ್ಕಳಿಗೆ ವೀಲ್ ಚೇರ್, ವಾಕರ್ ಡೈಫರ್ಸ್ ವಿತರಣೆ ನಿಟ್ಟೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕ್ಷೇಮಾದ ಮೂಳೆಚಿಕಿತ್ಸಾ ವಿಭಾಗದ ಮುಖ್ಯಸ್ಥ ಪ್ರೊ. ಡಾ.ವಿಕ್ರಮ್ ಶೆಟ್ಟಿ ಮಾತನಾಡಿ, ವಿಶೇಷ ಚೇತನ ಮಕ್ಕಳಿಗೆ ಅವರಿಗೆ ಆದ ಸಾಮರ್ಥ್ಯ ಇರುತ್ತದೆ. ಇದಕ್ಕೆ ಅವರಿಗೆ ಬೇಕಾದ ಅವಕಾಶ, ವ್ಯವಸ್ಥೆ ನಾವು ಮಾಡಬೇಕಾಗಿದೆ. ಇದನ್ನು ನಿಟ್ಟೆ ವೈದ್ಯಕೀಯ ಸಂಸ್ಥೆ ಮಾಡಿಕೊಂಡಿರುವುದು ಶ್ಲಾಘನೀಯ ಎಂದರು.

ಸಮನ್ವಯ ಸಂಪನ್ಮೂಲ ಶಿಕ್ಷಕಿ ಕಿಶೋರಿ ಮಾತನಾಡಿದರು.

ಎಬಿಎಸ್‌ಎಂಐಡಿಎಸ್ ಉಪ ಪ್ರಾಂಶುಪಾಲ ಪ್ರೊ. ಡಾ.ಎಂ.ಎಸ್. ರವಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ 18 ವಿಶೇಷ ಚೇತನ ಮಕ್ಕಳಿಗೆ ಐದು ವೀಲ್ ಚೇರ್, ಮೂರು ವಾಕರ್, ವಾಟರ್ ಬೆಡ್, ಡೈಫರ್ಸ್ ವಿತರಿಸಲಾಯಿತು.

ಪೀಡಿಯಾಟ್ರಿಕ್ ಮತ್ತು ಪ್ರಿವೆಂಟಿವ್ ಡೆಂಟಿಸ್ಟ್ರಿ ಎಚ್ಒಡಿ ಪ್ರೊ.ಡಾ.ಮಂಜು ಆರ್. ಉಪಸ್ಥಿತರಿದ್ದರು. ಪ್ರೊ.ಡಾ.ಅಮರಶ್ರೀ ಎ.ಶೆಟ್ಟಿ ಸ್ವಾಗತಿಸಿದರು. ಪಿ.ಜಿ.ಸಮೀಕ್ಷಾ ನಿರೂಪಿಸಿದರು., ಡಾ.ಮೇಘನಾ ಭಂಡಾರಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News