×
Ad

ದೇರಳಕಟ್ಟೆ | ಅಡುಗೆ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಬೆಂಕಿ: ಸ್ವೀಟ್ ಕಾರ್ನರ್ ಸ್ಟಾಲ್ ಭಸ್ಮ

Update: 2024-04-19 15:22 IST

ಕೊಣಾಜೆ, ಎ.19: ದೇರಳಕಟ್ಟೆ ಸಮೀಪದ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಸ್ವೀಟ್ ಕಾರ್ನರ್ ಸ್ಟಾಲ್ ಒಂದರಲ್ಲಿ ಗ್ಯಾಸ್ ಸಿಲಿಂಡರ್ ನಲ್ಲಿ ಸೋರಿಕೆ ಉಂಟಾಗಿ ಬೆಂಕಿ ಅವಘಡ ಸಂಭವಿಸಿದ ಘಟನೆ ಗುರುವಾರ ಸಂಜೆ ನಡೆದಿದೆ.

ಬಶೀರ್ ಎಂಬವರು ವ್ಯಾಪಾರದಲ್ಲಿ ತೊಡಗಿದ್ದ ಸಂದರ್ಭ ಸಿಲಿಂಡರ್ ನಿಂದ ಗ್ಯಾಸ್ ಸೋರಿಕೆ ಉಂಟಾಗಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಅಲ್ಲಿದ್ದ ಗ್ರಾಹಕರು ಹಾಗೂ ಸ್ಟಾಲ್ ಮಾಲಕ ಓಡಿ ಪಾರಾಗಿದ್ದಾರೆ. ಬೆಂಕಿ ತೀವ್ರಗೊಂಡಂತೆ ಸಾರ್ವಜನಿಕರು ಹೊಯ್ಗೆ, ನೀರು ಹಾಯಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದರೂ ಸಿಲಿಂಡರ್ ಪೂರ್ತಿ ಸೋರಿಕೆಯುಂಟಾಗಿ ಸ್ಟಾಲ್ ಭಾಗಶಃ ಸುಟ್ಟುಹೋಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News