×
Ad

ದೇರಳಕಟ್ಟೆ: 'ನಿಟ್ಟೆ'ಯಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ

Update: 2023-12-09 16:12 IST

ದೇರಳಕಟ್ಟೆ, ಡಿ.9: ಎ.ಬಿ. ಶೆಟ್ಟಿ ಮೆಮೋರಿಯಲ್ ಇನ್ ಸ್ಟಿಟ್ಯೂಟ್ ಆಫ್ ಡೆಂಟಲ್ ಸಯನ್ಸಸ್ ಆಶ್ರಯದಲ್ಲಿ ನಿಟ್ಟೆ ವಿಶೇಷ ಮಕ್ಕಳ ಶಿಶು ಪಾಲನಾ ಕೇಂದ್ರ, ತಡೆಗಟ್ಟುವ ದಂತ ಚಿಕಿತ್ಸಾ ವಿಭಾಗ ಹಾಗೂ ದ.ಕ. ಜಿಲ್ಲಾ ಸಮಗ್ರ ಶಿಕ್ಷಣ ಕರ್ನಾಟಕ ಇವುಗಳ ಸಹಯೋಗದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಶುಕ್ರವಾರ ನಡೆಯಿತು.

ಡಾ.ಯು.ಎಸ್.ಕೃಷ್ಣನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ಐದು ವ್ಹೀಲ್ ಚೇರ್, ಎರಡು ರೋಲೇಟರ್ ವಾಕರ್ ಹಾಗೂ ಒಂದು ಏರ್ ಬೆಡ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರೊ. (ಡಾ.) ಅಮಿತಾ ಎಂ. ಹೆಗಡೆ, ಪೀಡಿಯಾಟ್ರಿಕ್ ಮತ್ತು ಪ್ರಿವೆಂಟಿವ್ ಡೆಂಟಿಸ್ಟ್ರಿ ವಿಭಾಗದ ಎಚ್.ಒ.ಡಿ.ಡಾ.ಮಂಜು ಆರ್., ಎನ್- ಎಸ್.ಪಿ.ಇ.ಸಿ.ಸಿ. ಕಾರ್ಯದರ್ಶಿ ಡಾ.ಅಮರಶ್ರೀ ಶೆಟ್ಟಿ, ವಿಶೇಷ ಶಿಕ್ಷಣ ತಜ್ಞರಾದ

ಡಾ.ಸತೀಶ್ ರಾವ್, ಸಿಂಥಿಯಾ ಡಿಸೋಜ, ಡಾ.ಸತೀಶ್ ರಾವ್ ಉಪಸ್ಥಿತರಿದ್ದರು

ಒಟ್ಟು 8 ವಿಶೇಷ ಮಕ್ಕಳು ತಮ್ಮ ಪೋಷಕರೊಂದಿಗೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News