ಧರ್ಮಸ್ಥಳ ದೂರು | ಎಸ್‌ಐಟಿ ತಂಡ ಧರ್ಮಸ್ಥಳಕ್ಕೆ
Update: 2025-07-25 23:47 IST
ಬೆಳ್ತಂಗಡಿ : ಧರ್ಮಸ್ಥಳ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಸರಕಾರ ನಿಯೋಜಿಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ತಂಡದ ಅಧಿಕಾರಿಗಳು ಇಂದು(ಜು.25) ಧರ್ಮಸ್ಥಳ ಠಾಣೆಗೆ ಆಗಮಿಸಿ ದಾಖಲೆಗಳನ್ನು ಪಡೆದುಕೊಂಡಿದ್ದಾರೆ.
ಎಸ್‌ಐಟಿ ತಂಡದ ಐಪಿಎಸ್ ಅಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರು ಹಾಗೂ ಇತರ ಅಧಿಕಾರಿಗಳು ಧರ್ಮಸ್ಥಳ ಠಾಣೆಗೆ ಆಗಮಿಸಿದ್ದರು.
ಧರ್ಮಸ್ಥಳ ಠಾಣೆಯ ಪಿ.ಎಸ್.ಐ ಸಮರ್ಥ್ ಅವರಿಂದ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಶುಕ್ರವಾರದಿಂದಲೇ ಅಧಿಕೃತವಾಗಿ ತನಿಖಾ ಕಾರ್ಯ ಆರಂಭವಾಗಿರುವುದಾಗಿ ತಿಳಿದು ಬಂದಿದೆ.