ಧರ್ಮಸ್ಥಳ ದೂರು| ಮೊದಲು ಗುರುತಿಸಿದ ಸ್ಥಳದಲ್ಲಿ ಪತ್ತೆಯಾಗಿದ್ದ ಪಾನ್ ಕಾರ್ಡ್ ಮೂಲ ಪತ್ತೆ ?
Update: 2025-07-31 18:15 IST
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಹೆಣ ಹೂತಿಟ್ಟಿದ್ದೇನೆಂದು ಹೇಳಿರುವ ವ್ಯಕ್ತಿ ಗುರುತಿಸಿದ ಮೊದಲ ಜಾಗದಲ್ಲಿ ಪತ್ತೆಯಾಗಿದ್ದ ಪಾನ್ ಕಾರ್ಡ್ ಬಗ್ಗೆ ಎಸ್.ಐ.ಟಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿರುವುದಾಗಿ ತಿಳಿದು ಬಂದಿದೆ.
ಮೊದಲ ಸ್ಥಳದಲ್ಲಿ ಸಿಕ್ಕಿರುವ ಪಾನ್ ಕಾರ್ಡ್ ಇದೇ ವರ್ಷ, 2025ರಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರಿಗೆ ಸೇರಿದ್ದು ಎನ್ನಲಾಗಿದೆ. ಆತ ತನ್ನ ಹಳ್ಳಿಯ ಮನೆಯಲ್ಲಿ ಜಾಂಡೀಸ್ ನಿಂದ ಮೃತಪಟ್ಟಿದ್ದಾರೆ ಎಂದು ಮೃತರ ತಂದೆಯನ್ನು ಎಸ್ ಐ ಟಿ ಅಧಿಕಾರಿಗಳು ಸಂಪರ್ಕಿಸಿದಾಗ ಅವರು ತಿಳಿಸಿದ್ದಾರೆ ಎಂದು ಎಸ್. ಐ. ಟಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.