ಮಂಗಳೂರು | ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ :ಯುವರಾಜ್‌ಗೆ ಚಿನ್ನದ ಪದಕ
Update: 2025-12-06 16:24 IST
ಮಂಗಳೂರು, ಡಿ.6: ನಗರದ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಯುವರಾಜ್ ಡಿ. ಕುಂದರ್ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಆಯೋಜಿಸಿದ ರಾಷ್ಟ್ರಮಟ್ಟದ 69ನೇ ನ್ಯಾಶನಲ್ ಸ್ಕೂಲ್ ಗೇಮ್ಸ್ ಅಥ್ಲೆಟಿಕ್ಸ್ನಲ್ಲಿ 200 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಡಿ.1ರಿಂದ 4ರವರೆಗೆ ಮಧ್ಯಪ್ರದೇಶದ ಇಂದೋರ್ನ ಎಮರಾಲ್ಡ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ನಡೆಯಿತು. ಯುವರಾಜ್ರ ಸಾಧನೆಗೆ ಪ್ರಾಂಶುಪಾಲ ಫಾ. ರೋಹನ್ ಡಿ ಆಲ್ಮೇಡಾ, ಉಪಪ್ರಾಂಶುಪಾಲ ಅಪರ್ಣಾ ಸುರೇಶ್, ಲಾರೆಲ್ ಡಿಸೋಜ, ಯುವರಾಜ್ರ ಹೆತ್ತವರಾದ ಧೀರಜ್ ಕೋಟ್ಯಾನ್ ಮತ್ತು ವೀಣಾ ಡಿ. ಕೋಟ್ಯಾನ್, ತರಬೇತುದಾರ ಭಕ್ಷಿತ್ ಸಾಲ್ಯಾನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.