×
Ad

ಜಿಲ್ಲಾ ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಯೋಗಾಸನ ಸ್ಪರ್ಧೆ: ಆಳ್ವಾಸ್ ಶಾಲೆಗೆ ಸಮಗ್ರ ಪ್ರಶಸ್ತಿ

Update: 2024-08-31 14:22 IST

ಮೂಡುಬಿದಿರೆ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಮೂಡುಬಿದಿರೆ ಹಾಗೂ ಬ್ಲೊಸಂ ಆಂಗ್ಲ ಮಾಧ್ಯಮ ಶಾಲೆ, ಬೆಳುವಾಯಿ ಇವರ ಸಹಯೋಗದಲ್ಲಿ  ಆಗಸ್ಟ್‌ 30 ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಯೋಗಾಸನ ಸ್ಪರ್ಧೆಯಲ್ಲಿ ಆಳ್ವಾಸ್ ಶಾಲೆಯ ಕ್ರೀಡಾಪಟುಗಳು 17 ವರ್ಷ ವಯೋಮಿತಿಯ ಬಾಲಕ - ಬಾಲಕಿಯರ ಹಾಗೂ 14 ವರ್ಷ ವಯೋಮಿತಿಯ ಬಾಲಕಿಯರ ತಂಡ ಪ್ರಶಸ್ತಿ ಯೊಂದಿಗೆ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಫಲಿತಾಂಶ :

17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಬಸವರಾಜ ಜಿ ಕೆ ದ್ವಿತೀಯ ಸ್ಥಾನ, ಚಂದ್ರಶೇಖರ ಬಿ ಎಚ್ ಐದನೇ ಸ್ಥಾನ, ರಿದಮಿಕ್ ಯೋಗದಲ್ಲಿ ಶ್ರೇಯಸ್ ಎ ಪಿ ಪ್ರಥಮ ಸ್ಥಾನ, ಆರ್ಟಿಸ್ಟಿಕ್ ಯೋಗದಲ್ಲಿ ಶ್ರೀವತ್ಸರಾಜ್ ಪ್ರಥಮ ಸ್ಥಾನ.

17 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ವಿಜಯಲಕ್ಷ್ಮೀ ಜಿ ಕೆ ದ್ವಿತೀಯ ಸ್ಥಾನ, ಅನನ್ಯ ಎಸ್ ಕೆ ತೃತೀಯ ಸ್ಥಾನ, ಸಾನ್ವಿ ವಿವೇಕ ಸಾವಳೆ ನಾಲ್ಕನೇ ಸ್ಥಾನ, ರಿದಮಿಕ್ ಯೋಗದಲ್ಲಿ ಕೀರ್ತಿ ಸುರೇಶ ಪ್ರಥಮ ಸ್ಥಾನ, ಆರ್ಟಿಸ್ಟಿಕ್ ಯೋಗದಲ್ಲಿ ಸಾನಿಕ ಕಲ್ಲಪ್ಪ ಸಾವಳೆ ಪ್ರಥಮ ಸ್ಥಾನ.

14 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಶಶಾಂಕ್ ಡಿ ಐದನೇ ಸ್ಥಾನ, ರಿದಮಿಕ್ ಯೋಗದಲ್ಲಿ ಆದರ್ಶ ಕಲ್ಲಪ್ಪ ಸಾವಳೆ ಪ್ರಥಮ ಸ್ಥಾನ, ಆರ್ಟಿಸ್ಟಿಕ್ ಯೋಗದಲ್ಲಿ ಭರತ್ ಬಿ ಡಿ ಪ್ರಥಮ ಸ್ಥಾನ.

14 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಶ್ರಾವಣಿ ಜಿ ಕೆ ಪ್ರಥಮ ಸ್ಥಾನ, ಭಾರ್ಗವಿ ಎಂ ಆರ್ ದ್ವಿತೀಯ ಸ್ಥಾನ, ರಿದಮಿಕ್ ಯೋಗದಲ್ಲಿ ಈಶ್ವರಿ ಪ್ರಥಮ ಸ್ಥಾನ, ಆರ್ಟಿಸ್ಟಿಕ್ ಯೋಗದಲ್ಲಿ ಮೇಘಾ ಹೊರಕೇರಿ ದ್ವಿತೀಯ ಸ್ಥಾನ.

ಜಿಲ್ಲಾ ಮಟ್ಟದಿಂದ ಒಂದೇ ಶಾಲೆಯಿಂದ ವಿಭಾಗ ಮಟ್ಟದ ಯೋಗಾಸನ ಸ್ಪರ್ಧೆಗೆ 15 ಜನ ಕ್ರೀಡಾಪಟುಗಳು ಆಳ್ವಾಸ್ ಶಾಲೆಯಿಂದ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ. ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ ಮೋಹನ ಆಳ್ವರು ಅಭಿನಂದನೆ ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News