×
Ad

ದ.ಕ.ಜಿಲ್ಲಾ ಮಟ್ಟದ ದಫ್ ಸ್ಪರ್ಧೆ : ತಂಡಗಳಿಗೆ ಆಹ್ವಾನ

Update: 2025-12-03 19:54 IST

ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಬೆಳ್ತಂಗಡಿ ತಾಲೂಕಿನ ಜೋಗಿಬೆಟ್ಟು ರಿಫಾಯಿ ಜುಮಾ ಮಸೀದಿ ಆಡಳಿತ ಸಮಿತಿಯ ಸಹಯೋಗದೊಂದಿಗೆ ಡಿ.20ರಂದು ದ.ಕ. ಜಿಲ್ಲಾ ಮಟ್ಟದ ದಫ್ ಸ್ಪರ್ಧೆ ಹಮ್ಮಿಕೊಂಡಿದೆ. ಮೊದಲಿಗೆ ತಾಲೂಕು ಮಟ್ಟದ ಸ್ಪರ್ಧೆಯು ಡಿ.11ರಂದು ನಡೆಯಲಿದ್ದು, ತಾಲೂಕು ಮಟ್ಟದಲ್ಲಿ ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದ ತಂಡಗಳನ್ನು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು.

ಜಿಲ್ಲಾ ಮಟ್ಟದ ಸ್ಪರ್ಧೆಯ ವಿಜೇತ ತಂಡಗಳಿಗೆ 10,000 ರೂ., 7,000 ರೂ. ಮತ್ತು 5,000 ರೂ. ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ನಗದು ಬಹುಮಾನ ಹಾಗೂ ತಾಲೂಕು ಮಟ್ಟದ ವಿಜೇತ ತಂಡಗಳಿಗೆ 3,000 ರೂ. ಮತ್ತು 2,000 ರೂ. ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ನಗದು ಬಹುಮಾನ ನಿಗದಿಪಡಿಸಲಾಗಿದೆ.

ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವ ತಂಡಗಳಿಗೆ 2000 ರೂ. ಮತ್ತು ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳಿಗೆ 1000ರೂ.  ಪ್ರಯಾಣ ಭತ್ಯೆ ಹಾಗೂ ಎಲ್ಲ ಕಲಾವಿದರಿಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರಮಾಣಪತ್ರ ನೀಡಲಾಗುವುದು.

ಆಸಕ್ತರು ಡಿ. 8ರ ಒಳಗಾಗಿ ತಾಲೂಕು ಮಟ್ಟದ ಸ್ಪರ್ಧೆಗಳ ಹೆಸರು ನೋಂದಾವಣೆಗೆ ಝುಬೈರ್‌ ತೋಡಾರ್: 8951163119 (ಮುಲ್ಕಿ ಮತ್ತು ಮೂಡಬಿದರೆ ತಾ.), ಯು.ಹೆಚ್ ಖಾಲಿದ್ ಉಜಿರೆ: 9845499527 (ಬೆಳ್ತಂಗಡಿ ತಾ.) ತಾಜುದ್ದೀನ್‌ ಅಮ್ಮುಂಜೆ : 9164266078 (ಮಂಗಳೂರು ತಾ.), ಅಬೂಬಕರ್ ಅನಿಲಕಟ್ಟೆ: 9448625980 (ಬಂಟ್ವಾಳ ತಾ.), ಹಮೀದ್ ಹಸನ್ ಮಾಡೂರು :9845364520 (ಉಳ್ಳಾಲ ತಾ.), ಡಾ.ಹಾಜಿ ಯಸ್. ಅಬೂಬಕರ್ ಅರ್ಲಪದವು: 9901726144 (ಪುತ್ತೂರು ತಾ.) ಶರೀಫ್ ಭಾರತ್ ಬಾಳಿಲ: 9845151519 (ಸುಳ್ಯ ಮತ್ತು ಕಡಬ ತಾ.) ಇವರನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News