×
Ad

ದ.ಕ. ಜಿಲ್ಲಾ ಮಟ್ಟದ ಮೀಫ್-ಸುಲ್ತಾನ್ ಕಪ್ ಫುಟ್ಬಾಲ್ ಪಂದ್ಯಾಟ

Update: 2024-01-14 20:19 IST

ಮಂಗಳೂರು: ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ ದ.ಕ ಮತ್ತು ಉಡುಪಿ ಜಿಲ್ಲೆ (ಮೀಫ್) ಇದರ ವತಿಯಿಂದ ಮಂಜನಾಡಿಯ ಯೆನೆಪೊಯ ಆಯುಷ್ ಫುಟ್ಬಾಲ್ ಮೈದಾನದಲ್ಲಿ ಶನಿವಾರ ದ.ಕ.ಜಿಲ್ಲಾ ಮಟ್ಟದ ಅಂತರ್ ಶಾಲಾ ಫುಟ್ಬಾಲ್ ಪಂದ್ಯಾಟ ನಡೆಯಿತು.

ಯೆನೆಪೊಯ ಗ್ರೂಪ್‌ನ ನಿರ್ದೇಶಕ ಯೆನೆಪೊಯ ಅಬ್ದುಲ್ಲಾ ಜಾವೇದ್ ಪಂದ್ಯಾಟ ಉದ್ಘಾಟಿಸಿದರು. ಅತಿಥಿಯಾಗಿ ನಿವೃತ್ತ ಪೊಲೀಸ್ ಉಪಾಯುಕ್ತ ಜಿ.ಎ. ಬಾವ ಮತ್ತು ದ.ಕ. ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್‌ನ ಅಧ್ಯಕ್ಷ ಡಿಂ ಅಸ್ಲಮ್ ಭಾಗವಹಿಸಿದ್ದರು.

ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಆಟಗಾರ ಸೈಯದ್ ಶಾರಿಕ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. 15 ವಿದ್ಯಾಸಂಸ್ಥೆಗಳ 300ಕ್ಕೂ ಮಿಕ್ಕಿ ಕ್ರೀಡಾಪಟುಗಳು ಭಾಗವಹಿಸಿದ್ದರು.

ಮೀಫ್ ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಕಣ್ಣೂರು ಸ್ವಾಗತಿಸಿದರು. ಕಾರ್ಯಕ್ರಮದ ಕನ್ವೀನರ್ ಮುಹಮ್ಮದ್ ಶಹಮ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಮೀಫ್ ಪೂರ್ವ ವಲಯ ಉಪಾಧ್ಯಕ್ಷ ಮುಸ್ತಫ ಸುಳ್ಯ, ಪ್ರತಿನಿಧಿಗಳಾದ ಬಿ.ಎ. ಇಕ್ಬಾಲ್, ಅನ್ವರ್ ಗೂಡಿನಬಳಿ ಉಪಸ್ಥಿತರಿದ್ದರು.

ಸಂಜೆ ನಡೆದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ವಹಿಸಿದರು. ಅತಿಥಿಯಾಗಿ ಖತರ್ ಬಾವಾ ಮೋನು ಭಾಗವಹಿಸಿದ್ದರು. ವೇದಿಕೆಯಲ್ಲಿ ಕೋಶಾಧಿಕಾರಿ ನಿಸಾರ್ ಮುಹಮ್ಮದ್, ಸದಸ್ಯರಾದ ಸಿರಾಜ್ ಮಣೆಗಾರ್, ರಝಾಕ್ ಹಜ್ಜಾಜ್ ಉಪಸ್ಥಿತರಿದ್ದರು.

ಉಪಾಧ್ಯಕ್ಷ ಬಿ.ಎಂ. ಮುಮ್ತಾಝ್ ಅಲಿ ಸ್ವಾಗತಿಸಿದರು. ಕಾರ್ಯದರ್ಶಿ ಮುಹಮ್ಮದ್ ಶಾರಿಕ್ ಕಾರ್ಯಕ್ರಮ ನಿರೂಪಿಸಿದರು.

ಫೈನಲ್ ಪಂದ್ಯದಲ್ಲಿ ಮಂಗಳೂರಿನ ಬದ್ರಿಯಾ ಕನ್ನಡ ಮಾಧ್ಯಮ ಶಾಲೆಯು ಪ್ರಥಮ ಮತ್ತು ಕಣ್ಣೂರು ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಬಹುಮಾನ ಪಡೆಯಿತು. ಮಂಗಳೂರಿನ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿತು.




 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News