ದಸರಾ ಪ್ರಯುಕ್ತ ದ.ಕ. ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟ: ಬದ್ರಿಯಾ ಹೆಲ್ತ್ ಲೀಗ್ ಸುರತ್ಕಲ್ ತಂಡಕ್ಕೆ ಪ್ರಶಸ್ತಿ
Update: 2025-09-30 00:24 IST
ಮಂಗಳೂರು: ದಸರಾ ಪ್ರಯುಕ್ತ ಶ್ರೀ ವೀರ ಮಾರುತಿ ದೇವಾಲಯ, ವ್ಯಾಯಾಮ ಶಾಲೆ ಮತ್ತು ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್, ಬ್ರದರ್ಸ್ ಯುವಕ ಮಂಡಲ (ರಿ) ಮೊಗವೀರ ಪಟ್ಟಣ, ಉಳ್ಳಾಲ ಇದರ ಜಂಟಿ ಅಶ್ರಯದಲ್ಲಿ ದಿ.ಫೈಲ್ವಾನ್ ಮೋತಿ ಪುತ್ರನ್ ಇವರ ಸ್ಮಾರಣಾರ್ಥ 78ನೇ ಶ್ರೀ ಶಾರದೋತ್ಸವ ಪ್ರಯುಕ್ತ ದ. ಕ. ಜಿಲ್ಲಾ ಮಟ್ಟದ ಪುರುಷರ ಮತ್ತು ಮಹಿಳೆಯರ ಕುಸ್ತಿ ಪಂದ್ಯಾಟ ರವಿವಾರ ನಡೆಯಿತು.
ಶ್ರೀ ಶಾರದಾ ಕಿಶೋರ್, ಶಾರದಾ ಶ್ರೀ, ಶಾರದಾ ಕೇಸರಿ, ಶ್ರೀ ಶಾರದಾ ಕುಮಾರಿ ಎಂಬ ಕುಸ್ತಿ ಪಂದ್ಯಾಟದಲ್ಲಿ ಬದ್ರಿಯಾ ಹೆಲ್ತ್ ಲೀಗ್ ಸುರತ್ಕಲ್ ತಂಡವು 2 ವಿಭಾಗದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
42 ಕೆಜಿ ವಿಭಾಗದಲ್ಲಿ ಫಾಹಿಮ್ ಪ್ರಥಮ, 50 ಕೆಜಿ ವಿಭಾಗದಲ್ಲಿ ಇಶಾಮ್ ಪ್ರಥಮ ಬಹುಮಾನ ಪಡೆದುಕೊಂಡರು ಎಂದು ಪ್ರಕಟನೆ ತಿಳಿಸಿದೆ.