×
Ad

ಈದ್‌ ಮೀಲಾದ್ | ಸೌಹಾರ್ದ ಸಂದೇಶ ಸಾರುವುದೇ ಮೆರವಣಿಗಗಳ ಉದ್ದೇಶ: ಅಬ್ದುಲ್ ‌ನಾಸಿರ್ ಲಕ್ಕಿಸ್ಟಾರ್

Update: 2024-09-14 14:25 IST

ಮಂಗಳೂರು: ಮೆರವಣಿಗೆ ಸಾಗುವ ಸಂದರ್ಭದಲ್ಲಿ ಸಾರ್ವಜನಿಕ ಸಂಚಾರ, ಶಾಂತಿ ಸುವ್ಯವಸ್ಥೆಗೆ ಅಡ್ಡಿಯಾಗದಂತೆ ಸ್ವಯಂ ಗಮನಹರಿಸಬೇಕು. ಸಮಾಜದ ಎಲ್ಲರಿಗೂ ಮೀಲಾದ್ ಸಂದೇಶ ತಲುಪಲು ಒತ್ತುನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ವಕ್ಪ್ ಸಲಹಾ ಸಮಿತಿ ಅಧ್ಯಕ್ಷ ಬಿ. ಎ ಅಬ್ದುಲ್ ‌ನಾಸಿರ್ ಲಕ್ಕಿಸ್ಟಾರ್ ಮನವಿ ಮಾಡಿದ್ದಾರೆ.

ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮ ಮಾಸಾಚಾರಣೆಯ ಪ್ರಯುಕ್ತ ಲೋಕದ ನಾನಾ ಭಾಗದಲ್ಲೂ ಪ್ರವಾದಿ ಪ್ರಕೀರ್ತನೆಗಳು ವಿವಿಧ ಕಾರ್ಯಕ್ರಮ ಗಳು ನಡೆಯುತ್ತಿದೆ. ಸೆಪ್ಟೆಂಬರ್‌ 16 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯೂ ಪ್ರವಾದಿ ಜನ್ಮ ದಿನ ಪ್ರಯುಕ್ತ ಎಲ್ಲಾ ಮಸೀದಿ ಆಡಳಿತ ಸಮಿತಿ ಅಧೀನದಲ್ಲಿ ಮಿಲಾದ್ ಮೆರವಣಿಗೆ ಗಳು ನಡೆಯುತ್ತದೆ.

ಲೋಕದಲ್ಲಿರುವ ಪ್ರತೀ ಧರ್ಮವನ್ನೂ ಅದನ್ನು ಅನುಸರಿಸುವವರನ್ನೂ ಗೌರವಿಸುವುದೇ ಪ್ರವಾದಿ ಜೀವನ ಸಂದೇಶ . ಇದಕ್ಕುನುಸಾರವಾಗಿ ಮುಸ್ಲಿಂ ರ ಮೆರವಣಿಗೆಗಳು ನಡೆಯುತ್ತದೆ. ಎಲ್ಲರಿಗೂ ಸೌಹಾರ್ದ ಸಂದೇಶ ಸಾರುವುದೇ ಮೆರವಣಿಗಗಳ ಉದ್ದೇಶ ಕೂಡ. ಹಲವಾರು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಮುದಾಯಕ್ಕೂ, ಸಮಾಜಕ್ಕೂ ದಾರಿದೀಪವಾಗುವಂತೆ ಕಾರ್ಯಪ್ರವೃತ್ತರಾಗಲೂ ಈ ಮೂಲಕ ‌ ದ ಕ ಜಿಲ್ಲೆಯ ಎಲ್ಲಾ ಜಮಾಅತ್ ಬಾಂಧವರಲ್ಲಿ ವಿನಂತಿಸುತ್ತೇನೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News