×
Ad

ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ

Update: 2024-08-29 20:03 IST

ಉಳ್ಳಾಲ: ಕೋಟೆಕಾರು ಪಟ್ಟಣ ಪಂಚಾಯತ್ನ ಅಧ್ಯಕ್ಷರಾಗಿ ಬಿಜೆಪಿಯ ದಿವ್ಯ ಸತೀಶ್ ಶೆಟ್ಟಿ ಮತ್ತು ಉಪಾಧ್ಯಕ್ಷರಾಗಿ ಪ್ರವೀಣ್ ಬಗಂಬಿಲ ಆಯ್ಕೆಯಾಗಿದ್ದಾರೆ.

ಕೋಟೆಕಾರು ಪಟ್ಟಣ ಪಂಚಾಯತ್ನ ಅಧ್ಯಕ್ಷಗಾದಿಗೆ ಸಾಮಾನ್ಯ, ಉಪಾಧ್ಯಕ್ಷಗಾದಿಗೆ ಹಿಂದುಳಿದ ವರ್ಗ(ಎ) ವನ್ನು ಮೀಸಲಿರಿಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಪಟ್ಟಣ ಪಂಚಾಯತ್ನ ಆರನೇ ವಾರ್ಡ್ ಬಗಂಬಿಲ-ವೈದ್ಯನಾಥ ನಗರದ ಬಿಜೆಪಿ ಪಟ್ಟಣ ಸದಸ್ಯರಾದ ದಿವ್ಯ ಸತೀಶ್ ಶೆಟ್ಟಿ ,ಹನ್ನೊಂದನೇ ವಾರ್ಡ್ ಮಡ್ಯಾರ್ ನ ಪಕ್ಷೇತರ ಸದಸ್ಯರಾದ ಹರೀಶ್ ರಾವ್, ಉಪಾಧ್ಯಕ್ಷ ಸ್ಥಾನಕ್ಕೆ ಐದನೇ ವಾರ್ಡ್ ಬಗಂಬಿಲದ ಬಿಜೆಪಿ ಪಟ್ಟಣ ಸದಸ್ಯರಾದ ಪ್ರವೀಣ್ ಬಗಂಬಿಲ ಮತ್ತು ಹದಿನಾರನೇ ವಾರ್ಡ್ ಅಜ್ಜಿನಡ್ಕದ ಕಾಂಗ್ರೆಸ್ ಸದಸ್ಯರಾದ ಅಹಮ್ಮದ್ ಬಾವ ಅಜ್ಜಿನಡ್ಕ ನಾಮ ಪತ್ರ ಸಲ್ಲಿಸಿದ್ದರು

ಕೋಟೆಕಾರು ಪಟ್ಟಣ ಪಂಚಾಯತ್ ಸಭಾ ಭವನದಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಮದ್ಯಾಹ್ನ ಪಟ್ಟಣ ಸದಸ್ಯರು ಅಭ್ಯರ್ಥಿಗಳ ಪರ ಕೈ ಎತ್ತುವ ಮೂಲಕ ಚುನಾವಣೆ ಪ್ರಕ್ರಿಯೆ ನಡೆಯಿತು. ಚುನಾವಣಾಧಿಕಾರಿಯಾಗಿ ಉಳ್ಳಾಲ ತಹಶೀಲ್ದಾರ್ ಪುಟ್ಟರಾಜು ಡಿ.ಎ ಅವರು ಪ್ರಕ್ರಿಯೆ ನಡೆಸಿಕೊಟ್ಟರು. ನಿರೀಕ್ಷೆಯಂತೆ ಬಿಜೆಪಿಯ ದಿವ್ಯಾ ಸತೀಶ್ ಶೆಟ್ಟಿ ಮತ್ತು ಪ್ರವೀಣ್ ಬಗಂಬಿಲ ಅವರಿಗೆ ಸಂಸದ ಬ್ರಿಜೇಶ್ ಚೌಟ ಸೇರಿದಂತೆ ತಲಾ 12 ಮತಗಳು ಲಭಿಸಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದರು. ಪಕ್ಷೇತರ ಸದಸ್ಯ ಹರೀಶ್ ರಾವ್ ಮತ್ತು ಕಾಂಗ್ರೆಸ್ನ ಅಹಮ್ಮದ್ ಬಾವ ಅಜ್ಜಿನಡ್ಕ ಅವರಿಗೆ ತಲಾ 6 ಮತಗಳು ಲಭಿಸಿದವು. ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸಂಸದ ಬ್ರಿಜೇಶ್ ಚೌಟ, ತಹಶೀಲ್ದಾರ್ ಪುಟ್ಟರಾಜು ಅಭಿನಂದಿಸಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News