ಮಹಿಳೆಯರು ನಿರ್ಭಿತಿಯಿಂದ ಹಕ್ಕು ಚಲಾಯಿಸಿದಾಗ ಸಬಲೀಕರಣ ಸಾಧ್ಯ : ನಜ್ಮಾ ಫಾರೂಖಿ
ಮಂಗಳೂರು: ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ದ. ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್ ) ಆಶ್ರಯದಲ್ಲಿ ಬ್ಯಾರಿಸ್ ಪಬ್ಲಿಕ್ ಸ್ಕೂಲ್ ಸಹಯೋಗದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರುಗಳಿಗೆ ದ್ವಿದಿನ ಆಂಗ್ಲ ಭಾಶಾ ವ್ಯಾಕರಣ ಕೌಶಲ್ಯ ವರ್ಧಕ ವಿಶೇಷ ತರಬೇತಿ ಶಿಬಿರ ಮಂಗಳೂರು ಹ್ಯಾಟ್ ಹಿಲ್ಸ್ ನಲ್ಲಿರುವ ಬೀ ಹೈವ್ ಸಭಾಂಗಣ ದಲ್ಲಿ ಜರಗಿತು.
2 ದಿನಗಳ ಕಾರ್ಯಾಗಾರದಲ್ಲಿ ಮೂಡುಶೆಡ್ಡೆ ಶಾರದಾ ಶುಭೋದಯ ವಿದ್ಯಾಲಯ ಪ್ರಾoಶುಪಾಲೆ ಶ್ಯಾಮಲಾ ಯೋಗೀಶ್ ಮುಟ್ಟ ಸಂಪನ್ಮೂಲ ವ್ಯಕ್ತಿ ಯಾಗಿ ಭಾಗವಹಿಸಿದ್ದರು.
ಕಾರ್ಯಾಗಾರ ಉದ್ಘಾಟಿಸಿದ ಮಂಗಳೂರು ಪೊಲೀಸ್ ಕಮಿಷನರೇಟ್ ಟ್ರಾಫಿಕ್ ಉಪ ವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ನಜ್ಮಾ ಫಾರೂಖಿ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಮೀಫ್ ಕಾರ್ಯಕ್ರಮ ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಮೀಫ್ ಅಧ್ಯಕ್ಷ ಮೂಸಬ್ಬ. ಪಿ. ಬ್ಯಾರಿ ಮಾತನಾಡಿ 2 ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಿದ ಅತ್ತ್ಯುತ್ತಮ ಶಿಕ್ಷಕರುಗಳಿಗೆ ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು. ಉಪಾಧ್ಯಕ್ಷ ಮಮ್ತಾಝ್ ಅಲಿ ಪ್ರಾಸ್ತಾವಿಕ ಭಾಷಣ ಮಾಡಿದರು.
ವೇದಿಕೆಯಲ್ಲಿ ಬ್ಯಾರಿಸ್ ಪಬ್ಲಿಕ್ ಸ್ಕೂಲ್ ಪ್ರಾoಶುಪಾಲರಾದ ಖದೀಜತುಲ್ ಖುಬ್ರಾ, ಹೆಚ್ಓಡಿ ಕ್ರಸ್ಟೀನ್ ಖಾನ್, ಮೀಫ್ ಪದಾಧಿಕಾರಿಗಳಾದ ಮುಸ್ತಫ ಸುಳ್ಯ, ಸಂಚಾಲಕ ಪರ್ವೀಝ್ ಅಲಿ,ಅನ್ವರ್ ಹುಸೈನ್ ಗೂಡಿನಬಳಿ ಕಾರ್ಯಕ್ರಮ ಸಂಯೋಜಕ ಶಾರಿಕ್ ಕುಂಜತ್ತಬೈಲ್, ರೆಹಮತುಲ್ಲಾ ಬುರೂಜ್, ಅಬ್ದುಲ್ ರಝಾಕ್ ಗೊಳ್ತಮಜಲು, ಶಾರದಾ ವಿದ್ಯಾಲಯ ಶಿಕ್ಷಕಿ ಶುಭ ರವೀಂದ್ರ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಕಣ್ಣೂರು ಸ್ವಾಗತಿಸಿ, ಬ್ಯಾರಿಸ್ ಸ್ಕೂಲ್ ನ ಅನುಷಾ ವಂದಿಸಿದರು, ರಿಫಾ ಕಾರ್ಯಕ್ರಮ ನಿರೂಪಿಸಿದರು.