ಕುಟುಂಬದ ಬೆಂಬಲವೇ ನನ್ನ ಸಾಧನೆಗೆ ಪ್ರಮುಖ ಕಾರಣ: ಎಂ.ಆರ್. ಪೂವಮ್ಮ
ಮಂಗಳೂರು: “ನಾನು ಆರನೇ ಕ್ಲಾಸ್ ನಲ್ಲಿದ್ದಾಗಲೇ ಕ್ರೀಡೆಯ ಬಗ್ಗೆ ಆಸಕ್ತಿ ಹೊಂದಿದ್ದೆ. ಕಬಡ್ಡಿ, ಪುಟ್ಬಾಲ್ ಆಡುತ್ತಿದ್ದ ನಾನು ಅಥ್ಲೆಟಿಕ್ ಬಗ್ಗೆ ಆಸಕ್ತಿ ಬೆಳೆಸಿ ಕೊಂಡೆ. ಈ ಬಾರಿಯ ಒಲಿಂಪಿಕ್ಸ್ ವರೆಗಿನ ನನ್ನ 24 ವರ್ಷಗಳ ಕ್ರೀಡಾ ಸಾಧನೆಯಲ್ಲಿ ನನ್ನ ಪೋಷಕರು ಹಾಗೂ ಪತಿ ಸೇರಿ ನನ್ನ ಕುಟುಂಬದ ಬೆಂಬಲವೇ ಪ್ರಮುಖ ಕಾರಣ ಎಂದು ಒಲಿಂಪಿಕ್ ಕ್ರೀಡೆಯಲ್ಲಿ ಮೂರು ಬಾರಿ ದೇಶವನ್ನು ಪ್ರತಿನಿಧಿಸಿರುವ, ಅರ್ಜುನ ಪ್ರಶಸ್ತಿ ಪುರಸ್ಕೃತೆ ಕ್ರೀಡಾಪಟು ಎಂ.ಆರ್. ಪೂವಮ್ಮ ಅಭಿಪ್ರಾಯಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ ನಿಂದ ಶನಿವಾರ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನನ್ನ ತಂದೆ ಬಜ್ಪೆ ಏರ್ ಪೋರ್ಟ್ ನಲ್ಲಿ ಉದ್ಯೋಗದಲ್ಲಿದ್ದ ಕಾರಣ ನನಗೆ ಅಲ್ಲಿ ಗ್ರೌಂಡ್ ಸಾಕಾಗುತ್ತಿರಲಿಲ್ಲ. ಹೀಗಾಗಿ ನನ್ನ ತಂದೆ ಮನೆಯನ್ನು ಮಂಗಳೂರಿಗೆ ಶಿಫ್ಟ್ ಮಾಡಿದಾರು. ಹೀಗೆ ತಾಲೂಕು ನಿಂದ ರಾಷ್ಟ್ರೀಯ ಮಟ್ಟದವರೆಗೆ ನನ್ನ ಅಮ್ಮ ಜೊತೆ ಗಿರುತ್ತಿದ್ದರು. ಮದುವೆ ಆದ ಬಳಿಕ ನನ್ನ ಪತಿಯೂ ಪ್ರೋತ್ಸಾಹ ನೀಡು ತ್ತಿದ್ದಾರೆ.
ಏನೇ ಸಾಧನೆ ಮಾಡಿದ್ರು ಅದರಲ್ಲಿ ನನ್ನ ಮನೆಯವರ ಶ್ರಮ ಅಧಿಕವಾದದ್ದು. ನನಗೀಗ 34 ವರ್ಷ ವಯಸ್ಸು, ನನಗೆ ಕ್ರೀಡೆಯನ್ನು ಈಗಲೇ ಬಿಡಲು ಮನಸ್ಸಿಲ್ಲ. ನಾನು ಮುಂದಿನ ಪೀಳಿಗೆಯ ಮಕ್ಕಳಿಗೂ ಮಾದರಿಯಾಗುವ ನಿಟ್ಟಿನಲ್ಲಿ ಕ್ರೀಡೆಯಲ್ಲಿ ಮುಂದುವರಿಯ ಬೇಕೆಂದು ಇದ್ದೇನೆ ಎಂದರು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತಾಡಿದ ರೇಷ್ಮಾ ಉಳ್ಳಾಲ್ ಅವರು, “ಒಲಿಂಪಿಕ್ ನಲ್ಲಿ ಪಾಲ್ಗೊಳ್ಳುವುದೇ ಒಂದು ದೊಡ್ಡ ಸಾಧನೆ. ಈ ಬಾರಿ ಪದಕ ವಿಜೇತರಷ್ಟೇ ಕುಸ್ತಿಪಟು ವಿನೇಶ್ ಪೊಗಟ್ ಅವರ ಸಾಧನೆಯೂ ಗಮನಾರ್ಹವಾದುದು. ಎಂ.ಆರ್. ಪೂವಮ್ಮ ಅವರ ಕ್ರೀಡಾ ಜೀವನದ ಕುರಿತು ನಾವೆಲ್ಲರೂ ಅರಿತುಕೊಳ್ಳಬೇಕಿದೆ ಎಂದರು.
ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ, ಪ್ರೆಸ್ ಕ್ಲಬ್ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಉಪಸ್ಥಿತರಿದ್ದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಸ್ವಾಗತಿಸಿದರು.
ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಆರ್. ಸಿ. ಭಟ್ ಕಾರ್ಯಕ್ರಮ ನಿರೂಪಿಸಿದರು.