ಫಾದರ್ ಮ್ಯಾಥ್ಯೂ ವಾಸ್ ಸ್ಮಾರಕ ಟೂರ್ನಮೆಂಟ್: ಫುಟ್ಬಾಲ್‌ನಲ್ಲಿ ಕುಲಶೇಖರ, ಥ್ರೋಬಾಲ್‌ನಲ್ಲಿ ಶಿರ್ತಾಡಿ ಚರ್ಚ್ ತಂಡ ಚಾಂಪಿಯನ್
ಮಂಗಳೂರು, ಅ.25: ಫಾ. ಮ್ಯಾಥ್ಯೂ ವಾಸ್ ಸ್ಮಾರಕ ಎಡನೇ ವರ್ಷದ ಅಂತರ್ ಚರ್ಚ್‌ಗಳ ಫುಟ್ಬಾಲ್‌ನಲ್ಲಿ ಕುಲಶೇಖರ ಚರ್ಚ್ ತಂಡ ಮತ್ತು ಥ್ರೋ ಬಾಲ್‌ನಲ್ಲಿ ಶಿರ್ತಾಡಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಸಂತ ಅಲೋಶಿಯಸ್ ಪಿಯು ಕಾಲೇಜ್ ಕ್ರೀಡಾಂಗಣದಲ್ಲಿ ರವಿವಾರ ಕಮ್ಯೂನಿಟಿ ಎಂಪವರ್‌ಮೆಂಟ್ ಟ್ರಸ್ಟ್ ಮಂಗಳೂರು, ಕ್ರಿಶ್ಚಿಯನ್ ಸ್ಪೋರ್ಟ್ಸ್ ಎಸೋಸಿಯೇಶನ್, ಕಥೋಲಿಕ್ ಸಭಾ ಮಂಗಳೂರು ಮತ್ತು ಉಡುಪಿ ಇವುಗಳ ಸಹಯೋಗದೊಂದಿಗೆ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯದ 30 ಫುಟ್ಬಾಲ್ ಮತ್ತು 17 ಥ್ರೋ ಬಾಲ್ ತಂಡಗಳು ಭಾಗವಹಿಸಿದ್ದವು.
ಫುಟ್ಬಾಲ್‌ನಲ್ಲಿ ಕುಲಶೇಖರ್ ಚರ್ಚ್ ತಂಡವು ಬಜ್ಜೋಡಿ ಚರ್ಚ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಬೇಳ ಮತ್ತು ಕಾಸರಗೋಡು ಚರ್ಚ್ ತಂಡ ತೃತೀಯ ಸ್ಥಾನ ಪಡೆಯಿತು.
ಥ್ರೋ-ಬಾಲ್‌ನಲ್ಲಿ ಶಿರ್ತಾಡಿ ಚರ್ಚ್ ತಂಡವು ಮಡಂತ್ಯಾರ್ ಚರ್ಚ್ ತಂಡವನ್ನು ಸೋಲಿಸಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತು. ವಾಮಂಜೂರು ಮತ್ತು ಬೊಂದೇಲ್ ಚರ್ಚ್ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟಿವೆ.
ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಬಿಷಪ್ ಅತೀ ವಂದನೀಯ ಡಾ ಅಲೋಶಿಯಸ್ ಪಾವ್ಲ್ ಡಿ ಸೋಜ ಪಂದ್ಯಾವಳಿಯನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ರೋಹನ್ ಕಾರ್ಪೊರೇಶನ್‌ನ ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೊಂತೇರೊ , ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜ ಮತ್ತು ಮಿಲಾಗ್ರಿಸ್ ಪಿಯು ಕಾಲೇಜಿನ ಪ್ರಾಂಶುಪಾಲ ಹಾಗೂ ದಿವಂಗತ ಫಾದರ್ ಮ್ಯಾಥ್ಯೂ ವಾಸ್ ಅವರ ಸಹೋದರ ಮೆಲ್ವಿನ್ ವಾಸ್ ಭಾಗವಹಿಸಿದ್ದರು.
ಸುಳ್ಯ ಚರ್ಚ್‌ನ ಧರ್ಮಗುರು ವಂದನೀಯ ವಿಕ್ಟರ್ ಡಿ ಸೋಜ, ಸಿಇಟಿ ಅಧ್ಯಕ್ಷೆ ಸೆಲೆಸ್ಟಿನ್ ಡಿಸೋಜ, ಸಿಎಸ್‌ಎ ಅಧ್ಯಕ್ಷ ಜಾನ್ ಪಾಯ್ಸ್, ಸಿಎಸ್‌ಎಂಪಿ ಅಧ್ಯಕ್ಷ ಆಲ್ವಿನ್ ಡಿ ಸೋಜ, ಸಿಎಸ್‌ಯುಪಿ ಅಧ್ಯಕ್ಷ ಸಂತೋಶ್ ಕರ್ನೇಲಿಯೋ, ಲಾರೆನ್ಸ್ ಕ್ರಾಸ್ತಾ, ಅರುಣ್ ಬ್ಯಾಪ್ಟಿಸ್ಟ್, ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಜ್ಯ , ರಾಷ್ಟ್ರೀಯ ,ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಸಾಧನೆಗೈದ ಎರಡೂ ಧರ್ಮಪ್ರಾಂತ್ಯಗಳ 15 ಉದಯೋನ್ಮುಖ ಕ್ರೀಡಾಪಟುಗಳಿಗೆ ಫಾ. ಮ್ಯಾಥ್ಯೂ ವಾಸ್ ಎಕ್ಸಲೆನ್ಸ್ ಇನ್ ಸ್ಪೋರ್ಟ್ಸ್ ಪ್ರಶಸಿ ನೀಡಲಾಯಿತು.
ನಿಶಾಂತ್ ಡಿ’ಸೋಜ (ಪಿಯುಸ್‌ನಗರ) - ಚೆಸ್, ಕ್ರಿಸ್ ಅಂಜೆನ್ ಬ್ಯಾಪ್ಟಿಸ್ಟ್ (ಉರ್ವಾ) - ಬ್ಯಾಡ್ಮಿಂಟನ್, ರಿಯಾನಾ ಧೃತಿ ಫೆನಾರ್ಂಡಿಸ್ (ಉರ್ವಾ) - ಈಜು, ವಿಯಾನ್ ಥಾಮಸ್ ಮಸ್ಕರೇನ್ಹಸ್ (ಉಡುಪಿ) - ಟೇಬಲ್ ಟೆನಿಸ್, ಡ್ಯಾಶಿಯಲ್ ಅಮಂಡಾ ಕೊನ್ಸೆಸೊ (ದೇರಬೈಲ್) - ರೋಲರ್ ಸ್ಕೇಟಿಂಗ್, ಜೆಸ್ನಿಯಾ ಕೊರೆಯಾ (ಬಿಜೈ) - ರೋಲರ್ ಸ್ಕೇಟಿಂಗ್, ರೀಮಾ ಡಿಸೋಜ (ಮೂಡುಬೆಳ್ಳೆ) - ಬಾಕ್ಸಿಂಗ್, ಜಾಯ್ಲಿನ್ ನತಾಲಿಯನ್ ಡಿ ಸೋಜ (ಕೆಮ್ಮಣ್ಣು) - ಬಾಕ್ಸಿಂಗ್, ತನಿಶಾ ಮಲಿನಾ ಕ್ರಾಸ್ಟೊ (ಮಿಲಾಗ್ರೆಸ್ ಕಲ್ಯಾಣಪುರ) -ವಾಲಿಬಾಲ್, ಫ್ಲಾವಿಶಾ ವೆಲಿಶಾ ಮೊಂತೇರೊ (ರಾಣಿಪುರ) - ಅತ್ಲ್ಲೆಟಿಕ್ಸ್, ಡೆಲಿಶಾ ಮಿರಾಂಡಾ (ಮೂಡುಬಿದಿರೆ) - ಫುಟ್ಬಾಲ್, ಶಾನ್ ಎಲ್ರಾಯ್ ಫೆನಾರ್ಂಡಿಸ್ (ಉಡುಪಿ) - ವಾಲಿಬಾಲ್, ವಿಪಿನ್ ಡಿಸೋಜ (ಸವೇರಾಪುರ) - ಹಾಕಿ , ಆ್ಯಶ್ಲಿನ್ ಡಿಸೋಜ(ಉಡುಪಿ) - ಫುಟ್ಬಾಲ್, ಒಸ್ವಿನ್ ಜೋಶುವಾ ಡಿಮೆಲ್ಲೊ (ಪಿಯುಸ್‌ನಗರ) - ಚೆಸ್ ಇವರನ್ನು ಸನ್ಮಾನಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಸಂತ ಅಲೋಶಿಯಸ್ ಸಂಸ್ಥೆಯ ರೆಕ್ಟರ್ ವಂದನೀಯ ಮೆಲ್ವಿನ್ ಪಿಂಟೊ ಮುಖ್ಯ ಅತಿಥಿಗಳಾಗಿ ಹಾಗೂ ಸಂತೋಷ್ ಅರೇಂಜರ್ಸ್ ಮಾಲೀಕ ಸಂತೋಷ್ ಸಿಕ್ವೇರಾ ಮತ್ತು ರಾಷ್ಟ್ರ ಮಟ್ಟದ ಕ್ರೀಡಾ ಪಟು ನಿಶೆಲ್ ಡಿಸೋಜ ಗೌರವ ಅತಿಥಿಗಳಾಗಿ ಆಗಮಿಸಿದ್ದರು.
ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ನಿಶೆಲ್ ಅವರನ್ನು ಸನ್ಮಾನಿಸಲಾಯಿತು.