×
Ad

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು: 2001ರ ಎಂಬಿಬಿಎಸ್ ವಿದ್ಯಾರ್ಥಿಗಳ ಪುನರ್ಮಿಲನ

Update: 2026-01-04 20:14 IST

ಮಂಗಳೂರು, ಜ.4: ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ 2001ರ ಎಂಬಿಬಿಎಸ್ ಬ್ಯಾಚ್‌ನ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಜಗತ್ತಿನ ನಾನಾ ಕಡೆ ಇರುವ 2001ರ ಬ್ಯಾಚ್‌ನ ವಿದ್ಯಾರ್ಥಿಗಳು ಒಟ್ಟು ಸೇರಿ ತಮ್ಮ 25 ವರ್ಷಗಳ ಸಂಭ್ರಮ ವನ್ನು ಆಚರಿಸಿದರು. ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕರಾದ ಫಾದರ್ ಫೌಸ್ಟಿನ್ ಲೋಬೊ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾದ ಡಾ. ಅನಿಲ್ ಶೆಟ್ಟಿ, ಪೀಡಿಯಾಟ್ರಿಕ್ಸ್ ಮುಖ್ಯಸ್ಥ ಡಾ. ರಶ್ಮಿ, ಡಾ. ನಿಬು, ಡಾ. ದಿಲೀಪ್ ಮತ್ತು ಡಾ. ಅಂಜುಮ್ ಶುಭ ಹಾರೈಸಿದರು. 2001ರ ಬ್ಯಾಚ್‌ನ ಡೀನ್ ಡಾ. ಸಂಜೀವ್ ರೈ , ಡಾ. ಆಶಾ ನೃತ್ಯವನ್ನು ಪ್ರದರ್ಶಿಸಿದರು.

2001ರಲ್ಲಿ ಪ್ರಾಧ್ಯಾಪಕರು ಮತ್ತು ಶಿಕ್ಷಕರನ್ನು ವಿದ್ಯಾರ್ಥಿಗಳು ಸನ್ಮಾನಿಸಿದರು. ಡಾ. ಜಾಯ್ಲೀನ್ ಡಿ, ಡಾ. ಕ್ರಿಸ್ಲ್ ಮತ್ತು ಡಾ. ಅನಾಹಿತಾ ಕಾರ್ಯಕ್ರಮ ನಿರೂಪಿಸಿದರು. 




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News