×
Ad

ಮೀಲಾದ್ ಕಾರ್ಯಕ್ರಮಗಳಲ್ಲಿ ಪ್ರವಾದಿ ಆದರ್ಶಗಳನ್ನು ಅನುಸರಿಸಿ: ದ.ಕ. ಜಿಲ್ಲಾ ವಕ್ಫ್ ಅಧ್ಯಕ್ಷ ಕರೆ

Update: 2023-09-27 12:27 IST

ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್

ಮಂಗಳೂರು, ಸೆ.27: ಮೀಲಾದುನ್ನಬಿ ಕಾರ್ಯಕ್ರಮಗಳಲ್ಲಿ ಪ್ರವಾದಿ ಮುಹಮ್ಮದ್ (ಸ.)ರವರ ಆದರ್ಶಗಳನ್ನು ಪಾಲಿಸಿ ಇಸ್ಲಾಂ ಧರ್ಮದ ಪಾವಿತ್ರ್ಯತೆಯನ್ನು ಕಾಪಾಡಲು ಒತ್ತು ನೀಡಬೇಕು ಎಂದು ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಕರೆ ನೀಡಿದ್ದಾರೆ.

ಮೀಲಾದ್ ಮೆರವಣಿಗೆಯಲ್ಲಿ ಶಿಸ್ತು ಪಾಲನೆ ಅನುಸರಿಸುವ ಮೂಲಕ ಶಾಂತ ರೀತಿಯಲ್ಲಿ ಮೆರವಣಿಗೆ ಸಾಗಲು ಆಯಾ ಮಸೀದಿಗಳ ಮುಖಂಡರು ಹಾಗೂ ಇಮಾಮರು ಸಮುದಾಯದ ಯುವಕರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಪ್ರವಾದಿಯವರ ಆದರ್ಶಗಳ ಪಾವಿತ್ರ್ಯತೆಯನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಮೆರವಣಿಗೆಗಳು ಸಾಗುವಾಗ ಇತರರ ಸಂಚಾರಕ್ಕೆ ತೊಂದರೆಯಾಗದಂತೆ ಗಮನಹರಿಸಬೇಕು, ವಾಹನಗಳ ಕರ್ಕಶ ಧ್ವನಿ, ನಿರಂತರ ಹಾರ್ನ್ ಮಾಡದೆ, ಸ್ವಲಾತ್ ಗಾಯನ ಮೂಲಕ ಭಕ್ತಿ ವಾತಾವರಣ ಮೂಡಿಸಬೇಕು, ಶಾಂತಿ ಕಾಪಾಡಲು ಎಲ್ಲರೂ ಸಹಕರಿಸಬೇಕಾಗಿ ಅವರು ಮನವಿ ಮಾಡಿದ್ದಾರೆ.

ಧ್ವನಿವರ್ಧಕ ಬಳಸುವುದಕ್ಕೆ ಅಥವಾ ಬ್ಯಾನರ್ ಇತ್ಯಾದಿಗಳಿಂದ ಅಥವಾ ವಿದ್ಯುತ್ ದೀಪಗಳಿಂದ ಅಲಂಕರಿಸಲು ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆಯಬೇಕು ಎಂದು ನಾಸಿರ್ ಲಕ್ಕಿಸ್ಟಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News