×
Ad

ಷೇರು ಮಾರ್ಕೆಟಿಂಗ್ ಹೂಡಿಕೆ ಹೆಸರಿನಲ್ಲಿ ವಂಚನೆ: ಪ್ರಕರಣ ದಾಖಲು

Update: 2025-12-23 22:27 IST

ಮಂಗಳೂರು, ಡಿ.23: ನಕಲಿ ಷೇರು ಮಾರ್ಕೆಟಿಂಗ್ ಹೂಡಿಕೆಯ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಆನ್‌ಲೈನ್ ಮೂಲಕ 85,68,387 ರೂ. ವಂಚನೆ ಮಾಡಿರುವ ಕುರಿತು ಸೆನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾನು ಇನ್‌ಸ್ಟಾಗ್ರಾಂ ನೋಡುತ್ತಿರುವಾಗ ಷೇರು ಮಾರುಕಟ್ಟೆ ಆನ್‌ಲೈನ್ ಟ್ರೇಡಿಂಗ್ ಕ್ಲಾಸ್‌ಗೆ ಲಿಂಕ್ ಮೂಲಕ ಸೇರ್ಪಡೆಗೊಂಡೆ. ಅ.31ರಂದು ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ತನ್ನ ಮೊಬೈಲ್ ನಂಬರ್ ಸೇರ್ಪಡೆಯಾಗಿದೆ. ಬಳಿಕ ಗ್ರೂಪ್‌ನಲ್ಲಿದ್ದ ಕಾವ್ಯ ಎಂಬಾಕೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿಕೊಂಡಿರುವುದಾಗಿ ಪರಿಚಯಿಸಿಕೊಂಡು ಷೇರು ಹೂಡಿಕೆ ಕುರಿತಂತೆ ವಿವಿಧ ಜಾಹೀರಾತುಗಳನ್ನು ಹಾಕಿ, ಹಣ ದುಪ್ಪಟ್ಟು ಮಾಡಬಹುದು ಎಂಬುದಾಗಿ ಮೇಸೆಜ್ ಕಳುಹಿಸಿದ್ದಳು. ಅದನ್ನು ನಂಬಿ ತಾನು ಸ್ಟಾಕ್ ಪರ್ಚೇಸ್ ಮಾಡಿದಾಗ ಸ್ವಲ್ಪಲಾಭಾಂಶವಾಗಿ ಹಣ ಬಂದಿದೆ. ಬಳಿಕ ತಾನು ನ.11ರಿಂದ ಡಿ.9ರ ವರೆಗೆ ಹಂತ ಹಂತವಾಗಿ 85,68,387 ರೂ. ಹೂಡಿಕೆ ಮಾಡಿದ್ದೆ. ಆದರೆ ಡಿ.10ರಂದು ಇನ್ನಷ್ಟು ಹಣ ಹೂಡಿಕೆ ಮಾಡುವಂತೆ ತಿಳಿಸಿದಾಗ ಈಗಾಗಲೇ ಹೂಡಿಕೆ ಮಾಡಿದ ಹಣ ವಾಪಾಸ್ ನೀಡುವಂತೆ ಕೇಳಿದೆ. ಅದಕ್ಕೆ ಸೇವಾ ತೆರಿಗೆ ಪಾವತಿಸುವಂತೆ ಅಪರಿಚಿತರು ಒತ್ತಾಯಿಸಿದಾಗ ಅನುಮಾನಗೊಂಡು ತಾನು ನಂತರ ಹೂಡಿಕೆ ಮಾಡಿಲ್ಲ. ಈ ಬಗ್ಗೆ ವಿಚಾರಿಸಿದಾಗ ತಾನು ಮೋಸ ಹೋಗಿರುವುದು ಹಣ ಕಳಕೊಂಡ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News