ಮೀಫ್‌ನಿಂದ ಉಚಿತ ಹೆಚ್ಚುವರಿ ನೀಟ್/ಸಿಇಟಿ ಸೀಟುಗಳು ಲಭ್ಯ
ಮಂಗಳೂರು, ಜ.16: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಕೇಂದ್ರ ಕಚೇರಿ ಮಂಗಳೂರು ಇದರ ವತಿಯಿಂದ ಅಡ್ಯಾರ್‌ನಲ್ಲಿರುವ ಬರಕಾ ಇಂಟರ್‌ನ್ಯಾಷನಲ್ ಶಾಲೆ ಮತ್ತು ಕಾಲೇಜಿನ ಸಹಯೋಗದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ಉಚಿತ 45 ದಿವಸಗಳ ನೀಟ್/ಸಿಇಟಿ ಕ್ರ್ಯಾಶ್ ಕೋರ್ಸ್ ಏರ್ಪಡಿಸಲಾಗಿದೆ.
ಈ ವಿದ್ಯಾಸಂಸ್ಥೆಯು ಉಚಿತ 25 ಸೀಟುಗಳ ಸೌಲಭ್ಯ ಒದಗಿಸುವುದರೊಂದಿಗೆ ಮೀಫ್‌ನಿಂದ ಉಚಿತ ಸೀಟುಗಳ ಸಂಖ್ಯೆಯು 200 ರಿಂದ 225ಕ್ಕೆ ಹೆಚ್ಚುವರಿಯಾಗಿದೆ.
ವಿದ್ಯಾರ್ಥಿಯು ಪಿಯುಸಿ (ವಿಜ್ಞಾನ) ಸಿದ್ದತಾ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು.ಮೀಫ್ ವಿದ್ಯಾ ಸಂಸ್ಥೆಯಲ್ಲಿ ಮತ್ತು ಸರಕಾರಿ ಪಿಯು ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಆಯ್ಕೆಯಲ್ಲಿ ಪ್ರಥಮ ಪ್ರಾಶಸ್ತ್ಯ ನೀಡಲಾ ಗುವುದು. ತರಗತಿಯು ಮಾರ್ಚ್ 21ರಿಂದ ಆರಂಭಗೊಳ್ಳಲಿದೆ. ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಜನವರಿ 21 ಕೊನೆಯ ದಿನವಾಗಿದೆ. ಸೀಮಿತ ಸೀಟುಗಳು ಮಾತ್ರ ಲಭ್ಯವಿರುವುದರಿಂದ ಮೊದಲು ನೋಂದಾಯಿಸುವವರಿಗೆ ಆದ್ಯತೆ ನೀಡಲಾಗುವುದು. ನಿಗದಿತ ಅರ್ಜಿ ನಮೂನೆಗಾಗಿ ಸ್ಥಳೀಯ ಮೀಫ್ ವಿದ್ಯಾ ಸಂಸ್ಥೆಗಳ ಪ್ರಾಂಶುಪಾಲರನ್ನು ಅಥವಾ ಮೀಫ್ ಕಚೇರಿಯನ್ನು ಮತ್ತು ಹೆಚ್ಚಿನ ಮಾಹಿತಿಗಾಗಿ ಮೀಫ್ ಮೊ.ಸಂ: 8792115666ನ್ನು ಸಂಪರ್ಕಿಸ ಬಹುದು ಎಂದು ಕೇಂದ್ರ ಸಮಿತಿಯ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಜೋಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.