×
Ad

ಜು.23ರಂದು ಕಿನ್ನಿಗೋಳಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Update: 2023-07-19 21:48 IST

ಮಂಗಳೂರು, ಜು.19: ಮಂಗಳೂರಿನ ಮಂಗಳ ಆಸ್ಪತ್ರೆ, ಮಂಗಳ ಕಿಡ್ನಿ ಫೌಂಡೇಶನ್ ಮತ್ತು ಮಂಗಳ ಶಿಕ್ಷಣ ಸಮೂಹ ಸಂಸ್ಥೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಜು.23ರಂದು ಕಿನ್ನಿಗೋಳಿಯಲ್ಲಿ ನಡೆಯಲಿದೆ.

ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯುವ ಶಿಬಿರದಲ್ಲಿ ಉಚಿತ ಸ್ಕ್ರೀನಿಂಗ್, ಮೂಳೆ ತಪಾಸಣೆ, ಮೂತ್ರಕೋಶ ತಪಾಸಣೆ, ಸ್ತ್ರೀರೋಗ ತಪಾಸಣೆ ಹಾಗೂ ಕಣ್ಣಿನ ತಪಾಸಣೆ ಸೌಲಭ್ಯ ಇರುತ್ತದೆ. ಮಂಗಳೂರಿನ ಖ್ಯಾತ ತಜ್ಞ ವೈದ್ಯರಾದ ಡಾ. ಮೊಯ್ದೀನ್ ನಫ್ಸೀರ್,ಡಾ. ಪ್ರವೀಣ್ ಕುಮಾರ್ ರೈ, ಡಾ. ಗೌರವ್ ಬಿ,ಶೆಟ್ಟಿ, ಡಾ. ಸಂಗೀತ ಕೆ, ಮತ್ತು ಡಾ. ಕೃಷ್ಣರಾಜ ಎಚ್ ಕೆ ಭಾಗವಹಿಸಲಿದ್ದಾರೆ.

ಸಮಾಲೋಚನೆ, ಅಗತ್ಯವುಳ್ಳವರಿಗೆ ವೈದ್ಯರು ಸೂಚಿಸಿದ ಲ್ಯಾಬೋರೇಟರಿ ಟೆಸ್ಟ್ ಗಳು, ಮ್ಯಾಮೋಗ್ರಂ, ಪ್ಯಾಪ್‌ಸ್ಮಿಯರ್ ಟೆಸ್ಟ್‌ಗಳು ಸಂಪೂರ್ಣ ಉಚಿತವಾಗಿದ್ದು ಮತ್ತು ರಿಯಾಯಿತಿ ದರದಲ್ಲಿ ಚಿಕಿತ್ಸೆಗಳನ್ನು ನಡೆಸಲಾಗುತ್ತದೆ ಎಂದು ಮಂಗಳ ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ. ಗಣಪತಿ ಪಿ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕ ಸಂಖ್ಯೆ 7483920368, 9483647338, 9567596364,8105716830

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News